ನಶೆಮುಕ್ತ ಚಿಂತಾಮಣಿ ನಿರ್ಮಾಣಕ್ಕೆ ಕೈ ಜೋಡಿಸಿ drug

ನಶೆ ಮುಕ್ತ ಚಿಂತಾಮಣಿ ನಿರ್ಮಾಣಕ್ಕೆdrug ಕೈ ಜೋಡಿಸಿದ ಆಟೋ ಚಾಲಕರು 'ಬೇಡ ಬ್ರೋ' ಅಭಿಯಾನಕ್ಕೆ ಚಾಲನೆ ನೀಡಿದ ತಹಸೀಲ್ದಾರ್​ ಮತ್ತು ಪೊಲೀಸ್​ ಅಧಿಕಾರಿಗಳು.
ನಶೆ ಮುಕ್ತ ಚಿಂತಾಮಣಿ ನಿರ್ಮಾಣಕ್ಕೆdrug ಕೈ ಜೋಡಿಸಿದ ಆಟೋ ಚಾಲಕರು 'ಬೇಡ ಬ್ರೋ' ಅಭಿಯಾನಕ್ಕೆ ಚಾಲನೆ ನೀಡಿದ ತಹಸೀಲ್ದಾರ್​ ಮತ್ತು ಪೊಲೀಸ್​ ಅಧಿಕಾರಿಗಳು.
Published on
ಚಿಂತಾಮಣಿ :
ಮಾದಕ ವಸ್ತುಗಳಿಗೆ ದಾಸರಾದರೆ ಇಡೀ ಕುಟುಂಬವೇ ಬೀದಿಪಾಲಾಗುತ್ತದೆ. ಆದ್ದರಿಂದ ಚಿಂತಾಮಣಿಯನ್ನು ನಶೆ ಮುಕ್ತಗೊಳಿಸಲು ನೀವೆಲ್ಲರೂ ಒಕ್ಕೊರಲಿನಿಂದ ಡ್ರಗ್ಸ್​ ಬೇಡ ಬ್ರೋ ಎಂದು ಪಣ ತೊಡಿ ಎಂದು ತಹಸೀಲ್ದಾರ್​ ಸುದರ್ಶನ್​ ಯಾದವ್​ ಕರೆ ನೀಡಿದರು.
ತಾಲೂಕು ಆಡಳಿತ, ಪೊಲೀಸ್​ ಇಲಾಖೆದಿಂದ ನಗರದ ಜನರಿಗೆ ಮಾದಕ ವಸ್ತುಗಳ ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಚಿಂತಾಮಣಿಯನ್ನು ನಶೆಮುಕ್ತ ಹಾಗೂ ಡ್ರಗ್ಸ್​ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಹಮ್ಮಿಕೊಂಡಿದ್ದ 'ಬೇಡ ಬ್ರೋ' ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಚಿಂತಾಮಣಿ ಗ್ರಾಮಾಂತರ ಠಾಣೆ ಇನ್​ಸ್ಪೆಕ್ಟರ್​ ಶಿವರಾಜ್​ ಮಾತನಾಡಿ, ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಧೂಮಪಾನ, ಗಾಂಜಾ, ಗುಟ್ಕಾ ಮುಂತಾದ ಮಾದಕ ವಸ್ತುಗಳಿಂದ ಬರುವ ಶ್ವಾಸಕೋಶದ ಕ್ಯಾನ್ಸರ್​ನಿಂದ ಮೃತಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಮಾದಕ ವ್ಯಸನಗಳನ್ನು ತೊಡೆದುಹಾಕಲು ಕರ್ನಾಟಕ ಸರ್ಕಾರ ಆರಂಭಿಸಿರುವ 'ರೈಸ್​' ಯೋಜನೆ ಬಗ್ಗೆ ವಿವರಿಸಿದರು.
ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟವಾಗುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ, ಆರೋಗ್ಯಯುತವಾದ ಚಿಂತಾಮಣಿ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.ಚಿಂತಾಮಣಿ ನಗರ ಠಾಣೆ ಇನ್​ಸ್ಪೆಕ್ಟರ್​ ವಿಜಿಕುಮಾರ್​ ಮಾತನಾಡಿ, ಆಟೋ ಚಾಲಕರು ನೀವು ಗಲ್ಲಿಗಲ್ಲಿಗಳಲ್ಲಿ ಸಂಚರಿಸುತ್ತೀರಿ, ಶಾಲಾ&ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರ ಸಂಪರ್ಕ ನಿಮಗಿರುತ್ತದೆ.
ಸಮಾಜಕ್ಕೆ ನಿಮ್ಮ ಕಡೆಯಿಂದಲೂ ಒಳ್ಳೆಯ ಸಂದೇಶ ನೀಡುವ ಅವಕಾಶವಿದೆ. ಸ್ಕೂಲ್​ ಪರಿಸರಗಳಲ್ಲಿ ಸಿಗರೇಟ್​ ಅಥವಾ ಇತರ ಗಾಂಜಾ ಚಟಗಳಿಗೆ ಬಲಿಯಾಗುತ್ತಿರುವ ಹುಡುಗರಿಗೆ ಬುದ್ಧಿಮಾತು ಹೇಳಿದರೆ ಅವರ ಜೀವನವೇ ಬದಲಾಗುತ್ತದೆ ಎಂದರು.drug
ನಗರಸಭೆ ಪೌರಾಯುಕ್ತ ಜಿ.ಎನ್​.ಚಲಪತಿ ಮಾತನಾಡಿ, ನಮ್ಮೂರು ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ. ಕಷ್ಟಪಟ್ಟು ದುಡಿಯುವ ಆಟೋ ಚಾಲಕರಿಗೆ ನಿಮ್ಮ ಭವಿಷ್ಯ ನಮಗೆ ಮುಖ್ಯ. ಡ್ರಗ್ಸ್​, ಸೊಲ್ಯೂಷನ್​ ಕುಡಿಯುವುದು, ಟ್ಯಾಬ್ಲೆಟ್ಸ್​ ತಿನ್ನುವುದು ಮತ್ತು ಇಂಜೆಕ್ಷನ್​ ಹಾಕಿಕೊಳ್ಳುವುದರಿಂದ ದೂರವಿದ್ದು ಚಿಂತಾಮಣಿ ಡ್ರಗ್ಸ್​ ಮುಕ್ತವಾಗಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ದಂಡಾಧಿಕಾರಿಗಳು, ನಗರ ಮತ್ತು ಗ್ರಾಮಾಂತರ ಠಾಣೆ ಅಧಿಕಾರಿಗಳು, ಪೊಲೀಸ್​ ಸಿಬ್ಬಂದಿ ಸಮ್ಮುಖದಲ್ಲಿ ಅಟೋ ಚಾಲಕರು ಚಿಂತಾಮಣಿಯನ್ನು ನಶೆ ಮುಕ್ತಗೊಳಿಸುವುದಾಗಿ ಎಲ್ಲರೂ ಪ್ರತಿೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net