ವಿಬಿ-ಜಿ ರಾಮ್-ಜಿಯಿಂದ ಉದ್ಯೋಗ ಭದ್ರತೆ

ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ, ಭಾರತ ಜೋಡೊ ಕುರಿತು ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕರು ಉದ್ಯೋಗ ಖಾತ್ರಿ ಉಮೇಶ ಸಾವಳಗಿ, ಪಿಡಿಒ ಎಸ್.ಎ. ಸಾರವಾನ, ಕಾರ್ಯದರ್ಶಿ ಮಂಜುನಾಥ ಬಡಿಗೇರ ಇತರರಿದ್ದರು.
ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ವಿಬಿ-ಜಿ ರಾಮ್-ಜಿ, ಭಾರತ ಜೋಡೊ ಕುರಿತು ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕರು ಉದ್ಯೋಗ ಖಾತ್ರಿ ಉಮೇಶ ಸಾವಳಗಿ, ಪಿಡಿಒ ಎಸ್.ಎ. ಸಾರವಾನ, ಕಾರ್ಯದರ್ಶಿ ಮಂಜುನಾಥ ಬಡಿಗೇರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ ಹೇಳಿಕೆ
  • ಕುಂಬಾರಹಳ್ಳದಲ್ಲಿ ಗ್ರಾಮಸ್ಥರ ಸಭೆ
ಜಮಖಂಡಿ: ವಿಬಿ-ಜಿ ರಾಮ್ ಜಿ ಯೋಜನೆಯು ಗ್ರಾಮಸ್ಥರಿಗೆ ಉದ್ಯೋಗ ಭದ್ರತೆಯೊಂದಿಗೆ ಗ್ರಾಮದ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಗ್ರಾಮಸ್ಥರಿಗೆ ವಿಬಿ-ಜಿ ರಾಮ್-ಜಿ ಯೋಜನೆಯ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು.
ವಾರ್ಷಿಕ ಉದ್ಯೋಗ ಖಾತ್ರಿ ಮಾನವ ದಿನಗಳನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕೂಲಿ ಕಾರ್ಮಿಕರ ದಿನಗೂಲಿ ಮೊತ್ತವನ್ನು 370 ರೂ. ದಿಂದ 382 ರೂ. ವರೆಗೆ ಹೆಚ್ಚಿಸಲಾಗಿದೆ. ವಾರ್ಷಿಕವಾಗಿ ಒಂದು ಗ್ರಾಮೀಣ ರೋಜ್‌ಗಾರ ಗ್ಯಾರಂಟಿ ಕಾರ್ಡ್ ಮೂಲಕ 47,750 ರೂ. ಗಳವರೆಗೆ ಆದಾಯ ಗಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ನೂತನ ಯೋಜನೆಯ ಒಟ್ಟು 318 ವಿವಿಧ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವರ್ಷದಲ್ಲಿ 60 ದಿನಗಳ ಕಾಲ ಯೋಜನೆಯ ಕೂಲಿ ಕೆಲಸದಿಂದ ವಿನಾಯಿತಿ ಅಥವಾ ವಿರಾಮ ನೀಡಲಾಗುತ್ತದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಯುವಕರಿಗೆ ಭಾರತ್ ಜೋಡೊ ಕುರಿತಾಗಿ ಮಾಹಿತಿ ನೀಡಿದರು. ಸಹಾಯಕ ನಿರ್ದೇಶಕರು ಉದ್ಯೋಗ ಖಾತ್ರಿ ಉಮೇಶ ಸಾವಳಗಿ, ಪಿಡಿಒ ಎಸ್.ಎ. ಸಾರವಾನ, ಕಾರ್ಯದರ್ಶಿ ಮಂಜುನಾಥ ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net