ಡಿ.6ರಂದು ಉದ್ಯೋಗ ಮೇಳ job

ಡಿ.6ರಂದು ಉದ್ಯೋಗ ಮೇಳ job
ಡಿ.6ರಂದು ಉದ್ಯೋಗ ಮೇಳ job
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜೀವ್​ ಕುಮಾರ್​ ಮಾಹಿತಿ
ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಕ್ರಾಸ್​ನ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ಡಿ.6ರಂದು ಬೃಹತ್​ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜೀವ್​ ಕುಮಾರ್​ ತಿಳಿಸಿದರು. job
ಜ್ಞಾನ ಜ್ಯೋತಿ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಬಿ.ಎಂ.ಮೂರ್ತಿ ಅವರ 25ನೇ ಪುಣ್ಯಸ್ಮರಣೆ ಅಂಗವಾಗಿ ಮೇಳ ಆಯೋಜಿಸಿದ್ದು, ಉದ್ಯೋಗದಾತ ಫೌಂಡೇಷನ್​, 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಸ್ಥಳಿಯ ಯುವಜನರು ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಮೇಳಕ್ಕೆ ಬರುವ ಕಂಪನಿಗಳಿಗೆ ಹತ್ತು ಸಾವಿರ ಉದ್ಯೋಗಿಗಳ ಅವಶ್ಯಕತೆ ಇದೆ. ಎಸ್ಸೆಸ್ಸೆಲ್ಸಿ, ಐಟಿಐ, ಡಿಪೊಮಾ, ಡಿ.ಎಡ್​, ಬಿ.ಎಡ್​, ಡಿ ಫಾರ್ಮ, ಬಿ ಫಾರ್ಮ, ಯಾವುದೇ ಪದವಿ ಹೊಂದಿರುವ ಯುವಕ ಯುವತಿಯರು ಭಾಗವಹಿಸಬಹುದು. ಯಾವುದೇ ಶುಲ್ಕವಿಲ್ಲ, ಸ್ವವಿವರ, ವಿದ್ಯಾರ್ಹತೆಯ ಪ್ರಮಾಣಪತ್ರದೊಂದಿಗೆ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು. ಅಗತ್ಯ ಕೌಶಲಗಳ ಕೊರತೆಯಿದ್ದಲ್ಲಿ ತರಬೇತಿ ನೀಡಲಾಗುವುದು ಎಂದರು.
ಉದ್ಯೋಗದಾತ ಫೌಂಡೇಷನ್​ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಸುತ್ತಮುತ್ತಲಿನ ಕಂಪನಿಗಳನ್ನು ಕರೆಸುತ್ತಿರುವುದರಿಂದ ಯುವ ಜನರು ಉದ್ಯೋಗಕ್ಕಾಗಿ ಹೆಚ್ಚು ದೂರ ಹೋಗಬೇಕಾಗುವುದಿಲ್ಲ. ಐಫೋನ್​ ತಯಾರಿಕಾ ಕಂಪನಿ 1500 ಮಂದಿ ಐಟಿಐ, ಡಿಪ್ಲೊಮಾ, ಪಿಯುಸಿ ಆಗಿರುವ ಯುವಜನರಿಗೆ ಉದ್ಯೋಗ ನೀಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರು.
ಕ್ರಿಯೆಟಿವ್​ ಇಂಜಿನಿಯರಿಂಗ್​ ಕಂಪನಿಗೆ ಐಟಿಐ, ಡಿಪ್ಲೊಮಾ ಮಾಡಿರುವ 500 ಉದ್ಯೋಗಿಗಳ ಅವಶ್ಯಕತೆಯಿದೆ. ಮೆಟ್​ ಪ್ಲಸ್​ ಕಂಪನಿಗೆ ಡಿಫಾರ್ಮ, ಬಿಫಾರ್ಮ ಮಾಡಿರುವ ನೂರು ಜನರ ಅಗತ್ಯವಿದೆ. ಕೋಲಾರದ ಟಾಟಾ ಎಲೆಕ್ಟ್ರಾನಿಕ್ಸ್​ ಕಂಪನಿಗೆ ಐಟಿಐ, ಡಿಪ್ಲೊಮಾ, ಪದವಿ ಹೊಂದಿರುವ 500 ಮಂದಿಯ ಅಗತ್ಯವಿದೆ ಎಂದರು.
ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೆ.ಗುಡಿಯಪ್ಪ, ಜ್ಞಾನ ಜ್ಯೋತಿ ಶಾಲೆ ಪ್ರಾಂಶುಪಾಲೆ ಮನುಶ್ರೀ ರಾಜೀವ್​ ಕುಮಾರ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net