ಕೆಂಭಾವಿ ವಲಯದಲ್ಲಿ ೯ ಗ್ರಾಮ ಪಂಚಾಯಿತಿಗಳು ೫೩ ಗ್ರಾಮಗಳು ಬರುತ್ತಿದ್ದು ೧೦ ಮಂದಿ ಜಿವಿಪಿಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಯಕ್ತಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ೧೩ ಹಳ್ಳಿಗಳಲ್ಲಿ ಈ ಸರ್ವರ್ ಸಮಸ್ಯೆ ಇದ್ದು ಕೆಲವು ಗ್ರಾಮಗಳಲ್ಲಿ ಹೊರತುಪಡಿಸಿ ಇನ್ನುಳಿದ ಹಳ್ಳಿಗಳಲ್ಲಿ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ಅನಿವಾರ್ಯವಾಗಿ ಊರಿನ ಶಾಲೆಯ ಆವರಣ, ಸಮುದಾಯ ಭವನ, ಎತ್ತರದ ಪ್ರದೇಶ ಸೇರಿ ನೆಟ್‌ವರ್ಕ್ ಬರುವ ಸ್ಥಳದಲ್ಲಿ ಜಿವಿಪಿಗಳು ಗ್ರಾಹಕರ ಮನವೊಲಿಸಿ ಅಲ್ಲಿಗೆ ಕರೆದು ತಮ್ಮ ಕರ್ತವ್ಯ ನಿರ್ವಹಿಸುವಂತಾಗಿದೆ.