ದೂರಿನ ಮೇರೆಗೆ ಡಿವೈಎಸ್‌ಪಿ ರವಿ, ವೃತ್ತ ನಿರೀಕ್ಷಕ ದೀಪಕ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 200 ಗ್ರಾಂ ಬೆಳ್ಳಿ ಎರಡು ಚಿನ್ನದ ರಿಂಗ್ ಚಿನ್ನದ ಗುಂಡು ವಶಕ್ಕೆ ಪಡೆಯಲಾಗಿದ್ದು, ಶುಕ್ರವಾರ ಪಿರಿಯಾಪಟ್ಟಣದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಮುದ್ದುರಾಜ್, ಕುಮಾರಸ್ವಾಮಿ, ಪ್ರಸನ್ನ ಇದ್ದರು.