

ಬೈಕ್ನಲ್ಲಿ ಬಂದಿದ್ದ ಮೂವರು ಕಿವಿಯೋಲೆ ತೋರಿಸುವಂತೆ ಕೇಳಿದರು. ಈ ರೀತಿ ವಿನ್ಯಾಸದ ಕಿವಿಯೋಲೆ ನಮ್ಮಲ್ಲಿ ಇಲ್ಲ ಎಂದು ಹೇಳಿದೆವು. ಆ ಕೂಡಲೇ ಗನ್ ತೋರಿಸಿ ಬೆದರಿಸಿದರು. 30 ಗ್ರಾಂ ಚಿನ್ನಾಭರಣ, 50 ಸಾವಿರ ನಗದು ಎತ್ತಿಕೊಂಡು ಓಡಿಹೋದರು. ನಮ್ಮನ್ನು ಕಿರುಚದಂತೆ ಮುಖ ಪರಚಿ, ಬಾಯಿ ಮುಚ್ಚಿಸಿದರು.
ಸಂಜೆ 5.30ರಲ್ಲಿ ರಾಬರಿಯಾಗಿದೆ. ಬೈಕ್ನಲ್ಲಿ ಬಂದಿದ್ದ ಮೂವರು ಪಿಸ್ತೂಲ್ ತೋರಿಸಿ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಿದ್ದಾಗಿ ಜ್ಯುವೆಲರಿ ಅಂಗಡಿ ಮಾಲೀಕ ಮಾಣಿಕ್ ರಾಮ್ ದೂರು ಕೊಟ್ಟಿದ್ದಾರೆ. ದರೋಡೆ ಪ್ರಕರಣ ದಾಖಲಿಸಿಕೊಂಡಿದ್ದು, ಶ್ರೀವೇ ಆರೋಪಿಗಳನ್ನು ಬಂಧಿಸಲಾಗುವುದು.