ಮನೆಯಲ್ಲಿ ಚಿನ್ನಾಭರಣ ಕಳವು

Jewelry stolen from home
Jewelry stolen from home
Published on
ಚಿಂತಾಮಣಿ: ನಗರದ ಕನ್ನಂಪಲ್ಲಿ ಚೌಡೇಶ್ವರ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿದ ಖದೀಮರು, 231 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಮತ್ತು 25 ಸಾವಿರ ರೂ.ಕಳವು ಮಾಡಿದ್ದಾರೆ.
ಸಂಬಂಧಿಕರೊಬ್ಬರ ನಾಮಕರಣದ ಬಟ್ಟೆಗಳ ಖರೀದಿಗಾಗಿ ಬೆಂಗಳೂರಿಗೆ ಮಾ.28ರಂದು ರಾತ್ರಿ ಪತ್ನಿಯೊಂದಿಗೆ ಹೋಗಿದ್ದು, 30ರಂದು ಬಾಗಿಲು ತೆಗೆದು ನೋಡಿದಾಗ ಬೀರು, ಕಬೋರ್ಡ್​ಗಳಲ್ಲಿದ್ದ ಬಂಗಾರ, ಬೆಳ್ಳಿ ವಸ್ತುಗಳು ಮತ್ತು 25ಸಾವಿರ ರೂ. ನಗದು ದೋಚಿರುವುದು ಗೊತ್ತಾಯಿತು ಎಂದು ಮನೆ ಮಾಲೀಕ, ಯಗವಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಮಂಜುನಾಥ್​ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net