ವಾಲ್ವ್ ಗುಂಡಿಗೆ ಸಿಲುಕಿದ ಜೀಪ್ ಚಕ್ರ

ವಾಲ್ ಗುಂಡಿಗೆ ಬಿದ್ದ ಜೀಪ್ ಅನ್ನು  ಸ್ಥಳೀಯರು ಮೇಲೆತ್ತುತ್ತಿರುವುದು.
ವಾಲ್ ಗುಂಡಿಗೆ ಬಿದ್ದ ಜೀಪ್ ಅನ್ನು ಸ್ಥಳೀಯರು ಮೇಲೆತ್ತುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪ ಗ್ರಾಮ ಪಂಚಾಯಿತಿ
  • ನೀರಿನ ಟ್ಯಾಂಕ್ ವಾಲ್ ಗುಂಡಿಗೆ ಜೀಪ್‌ನ ಚಕ್ರ ಸಿಲುಕಿ
ಬೈಲುಕುಪ್ಪೆ: ಕೊಪ್ಪ ಗ್ರಾಮ ಪಂಚಾಯಿತಿ ಎದುರಿನ ನೀರಿನ ಟ್ಯಾಂಕ್ ವಾಲ್ ಗುಂಡಿಗೆ ಜೀಪ್‌ನ ಚಕ್ರ ಸಿಲುಕಿದ್ದು, ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಮಕ್ಕಳನ್ನು ಶಾಲೆಗೆ ಬಿಡಲೆಂದು ತೆರಳುತ್ತಿದ್ದಾಗ ನೀರಿನ ಟ್ಯಾಂಕ್ ಬಳಿಯಿದ್ದ ವಾಲ್ವ್ ಗುಂಡಿಗೆ ಚಕ್ರ ಸಿಲುಕಿಕೊಂಡಿದೆ. ನಂತರ ಸ್ಥಳೀಯರು ಸ್ಥಳಕ್ಕಾಗಮಿಸಿ ಚಕ್ರವನ್ನು ಮೇಲೆತಿದರು.
ಇತ್ತೀಚೆಗಷ್ಟೆ ಭುವನಹಳ್ಳಿ ಗ್ರಾಮ ಪಂಚಾಯಿತಿಯಿಂದ ಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ್ದೇನೆ . ಈ ವಿಚಾರ ಗಮನಕ್ಕೆ ಬಂದಿದೆ. ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಕ್ರಮ ತೆಗೆದುಕೊ ಳ್ಳುತ್ತೇನೆ ಎಂದ ಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net