ಜೆಇಇ ಮೇನ್ಸ್-2 ಫಲಿತಾಂಶ ಪ್ರಕಟ: ಕರ್ನಾಟಕಕ್ಕೆ ವಿಷ್ಣು ಟಾಪರ್, ಚೈತನ್ಯಾ ಟೆಕ್ನೋ ಆದಿತ್ಯಾಗೆ 87ನೇ ಸ್ಥಾನ

ಜೆಇಇ ಮೇನ್ಸ್-2ರ ಫಲಿತಾಂಶ ಪ್ರಕಟ
ಜೆಇಇ ಮೇನ್ಸ್-2ರ ಫಲಿತಾಂಶ ಪ್ರಕಟ
Published on

ಪ್ರಮುಖ ಮುಖ್ಯಾಂಶಗಳು

  • ಸೆಷನ್-1ರಲ್ಲಿ ಟಾಪರ್ ಆಗಿದ್ದ ಎ. ವಿಷ್ಣು ಸಾಯಿ ತೇಜ ಸೆಷನ್-2ರಲ್ಲಿಯೂ ರಾಜ್ಯದ ಟಾಪರ್
  • ಚೈತನ್ಯ ಟೆಕ್ನೋ ಮಾರತ್ತಹಳ್ಳಿ ಶಾಖೆಯ ಆದಿತ್ಯ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ 87ನೇ ಸ್ಥಾನ, ರಾಮ್ ನಿಖಿಲ್ ಪಾವಡ್ಡಿ 135ನೇ ಸ್ಥಾನ
  • 26 ಅಭ್ಯರ್ಥಿಗಳು ಶೇ.100 ಅಂಕ ಗಳಿಸಿದ್ದಾರೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲಾ ಐದು ವಿದ್ಯಾರ್ಥಿಗಳು ಶೇ.100 ಅಂಕ ಗಳಿಸುವ ಮೂಲಕ ಅಗ್ರಸ್ಥಾನ
ಬೆಂಗಳೂರು: ಐಐಟಿ ಸೇರಿ ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕಾಗಿ ನಡೆಸುವ ಜೆಇಇ ಮೇನ್ಸ್-2ರ ಫಲಿತಾಂಶ ಪ್ರಕಟವಾಗಿದೆ. ಕಸವನಹಳ್ಳಿಯ ನಾರಾಯಣ ಕೋ ಕಾವೇರಿ ಭವನ್ ವಿದ್ಯಾರ್ಥಿ ಎ. ವಿಷ್ಣು ಸಾಯಿ ತೇಜ ರಾಜ್ಯದ ಟಾಪರ್ ಆಗಿದ್ದಾರೆ.
ರಾಷ್ಟ್ರಮಟ್ಟದಲ್ಲಿ 28ನೇ ಸ್ಥಾನ ಪಡೆದಿದ್ದಾರೆ. ವಿಷ್ಣು ತೇಜ್ ಶೇ.99.99 ಪರ್ಸಂಟೈಲ್ ಅಂಕಗಳನ್ನು ಪಡೆದಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೋಮವಾರ ಸೆಷನ್-2ರ ಫಲಿತಾಂಶ ಪ್ರಕಟಿಸಿದೆ. ಸೆಷನ್-1ರಲ್ಲಿ ಟಾಪರ್ ಆಗಿದ್ದ ಎ. ವಿಷ್ಣು ಸಾಯಿ ತೇಜ ಸೆಷನ್-2ರಲ್ಲಿಯೂ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, ಈ ಬಾರಿಯೂ ಕರ್ನಾಟಕದ ಯಾವುದೇ ಅಭ್ಯರ್ಥಿ ಈ ಪರೀಕ್ಷೆಯಲ್ಲಿ

ಚೈತನ್ಯ ಟೆಕ್ನೋ ಆದಿತ್ಯಾಗೆ 87ನೇ ಸ್ಥಾನ

ಜೆಇಇ (ಮುಖ್ಯ)-2026 ಸೆಷನ್-2 ಅನ್ನು ಏ.2 ರಿಂದ 8ರವರೆಗೆ 319 ನಗರಗಳಲ್ಲಿ (ಭಾರತದ ಹೊರಗಿನ ಮನಾಮ, ದೋಹಾ ನಗರ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ, ಕುವೈತ್, ಕೌಲಾಲಂಪುರ್, ಕಠ್ಮಂಡು, ಅಬುಧಾಬಿ, ಪಶ್ಚಿಮ ಜಾವಾ, ವಾಷಿಂಗ್ಟನ್, ಲಾಗೋಸ್, ಮ್ಯೂನಿಚ್ ಮತ್ತು ದಮ್ಮಾಮ್ ಸೇರಿ 15 ನಗರಗಳ 584 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು.
ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 11,10,904 ಅಭ್ಯರ್ಥಿಗಳಲ್ಲಿ ಒಟ್ಟು 10,34,330 ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net