ದಾಬಸ್ಪೇಟೆ : ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಅವರು ೇತ್ರದಲ್ಲಿ ರಂಗೋಲಿ ಸ್ಪರ್ಧೆ ನಡೆಸುವ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಜೆಡಿಎಸ್ ಯಾವುದೇ ಕಾರ್ಯಕರ್ತರು ಅಡ್ಡಿಪಡಿಸಿಲ್ಲ. ಹೀಗಿದ್ದೂ, ಭಾರತೀಪುರದ ಮೋಹನ್ ಕುಮಾರ್ ಹಾಗೂ ಎಡೇಹಳ್ಳಿಯ ತೀರ್ಥಪ್ರಸಾದ್ ಅವರ ಮೇಲೆ ಸುಖಾಸುಮ್ಮನೆ ಸುಳ್ಳು ಆರೋಪ ಮಾಡುತ್ತಿರುವುದು ವಿಷಾದನೀಯ ಎಂದು ಜೆಡಿಎಸ್ ಮುಖಂಡರು ಬೇಸರ ವ್ಯಕ್ತಪಡಿಸಿದರು.
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಎಡೇಹಳ್ಳಿಯ ತೀರ್ಥಪ್ರಸಾದ್ ಅವರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸೋಂಪುರ ಜೆಡಿಎಸ್ ಅಧ್ಯ ಮೋಹನ್ಕುಮಾರ್ ಮಾತನಾಡಿ, ಶಾಸಕರ ಮೇಲೆ ನಮಗೂ ವಿಶ್ವಾಸವಿದೆ. ಇದೇ ವಿಶ್ವಾಸವನ್ನು ಅವರೂ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದರೆ ನಾವು ಸದಾ ಸ್ವಾಗತಿಸುತ್ತೇವೆ. ಆದರೆ, ರಂಗೋಲಿ ಸ್ಪರ್ಧೆಗೆ ಲಾರಿಗಳನ್ನು ಅಡ್ಡಿಪಡಿಸಲಾಗಿದೆ ಎಂಬುದು ಸುಳ್ಳು. ನಮ್ಮ ಲೇಔಟ್ಗೆ ಹೋಗುವ ರಸ್ತೆಯಲ್ಲಿ ಲಾರಿಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು, ನಾವು ಅದನ್ನು ತೆರವುಗೊಳಿಸಿದ್ದೇವಷ್ಟೇ ಎಂದು ಸ್ಪಷ್ಟಪಡಿಸಿದರು.
ಮುಖಂಡ ತೀರ್ಥಪ್ರಸಾದ್ ಮಾತನಾಡಿ, ಕಾಂಗ್ರೆಸ್ ಮುಖಂಡರಾದ ಗೋವಿಂದರಾಜು ಹಾಗೂ ಪ್ರಕಾಶ್ ಅವರು ರಂಗೋಲಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ್ದರು. ಅವರ ಕೆಲಸವನ್ನು ಅವರು ಮಾಡಲಿ ಎಂದು ನಾವು ಗ್ರಾಮಸ್ಥರ ಭೇಟಿಗೆ ತೆರಳಿ, ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದೆವು. ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಿಡುವುದು ಗ್ರಾಮಸ್ಥರ ವೈಯಕ್ತಿಕ ನಿರ್ಧಾರವಾಗಿತ್ತು. ಅವರಿಗೆ ಇಷ್ಟವಿಲ್ಲದ ಕಾರಣ ಭಾಗವಹಿಸಲಿಲ್ಲ. ಈ ವಿಷಯದಲ್ಲಿ ಯಾವುದೇ ಬೆದರಿಕೆ ಅಥವಾ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಖಂಡ ಜಿ.ವೆಂಕಟೇಶ್ ಮಾತನಾಡಿ, ಶಾಸಕರು ಒಳ್ಳೆಯ ಕೆಲಸ ಮಾಡಿದರೆ ಖಂಡಿತಾ ಅಭಿನಂದಿಸುತ್ತೇವೆ. ಅವರೂ ನಮ್ಮ ಶಾಸಕರೇ. ಆದರೆ ಪ್ರಸ್ತುತ ಸೋಂಪುರ ಹೋಬಳಿಯಲ್ಲಿ ನಡೆಯುತ್ತಿರುವ ಕೆಲಸಗಳೆಲ್ಲವೂ ಹಳೇ ಶಾಸಕರು ತಂದಿದ್ದ ಅನುದಾನದಲ್ಲಿ ಆಗುತ್ತಿವೆ. ಆ ಅನುದಾನ ಇನ್ನೂ ಎರಡು ವರ್ಷಗಳ ಕಾಲ ಸಾಕಾಗುತ್ತದೆ. ಪ್ರಸ್ತುತ ಶಾಸಕರು ಯಾವುದೇ ಹೊಸ ಕೆಲಸ ಮಾಡದೆ ಕೇವಲ ಜೆಡಿಎಸ್ ಮುಖಂಡರನ್ನು ದೂಷಿಸುವುದರಲ್ಲೆ ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.