ಜೆಡಿಎಸ್​ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು / DODABALLAPUR

ದೊಡ್ಡಬಳ್ಳಾಪುರದ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ ಜೆಡಿಎಸ್​ ಬೆಳ್ಳಿಹಬ್ಬದ ಅಂಗವಾಗಿ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆನಂದ್​, ಮುಖಂಡರಾದ ಪುಟ್ಟರಾಜು, ಸದಾಶಿವಯ್ಯ, ಮುನಿರಾಜು, ಕೆಂಪರಾಜು, ರಾಜಕುಮಾರ್​, ಮಂಜುಳಾ, ಅಶೋಕ್​, ರಮೇಶ್​, ನರಸಿಂಹಗೌಡ, ಚೌಡಪ್ಪ, ರಾಮಕೃಷ್ಣಪ್ಪ, ನಾಗರಾಜು, ನರಸಿಂಹಮೂರ್ತಿ ಇತರರು ಇದ್ದರು.
ದೊಡ್ಡಬಳ್ಳಾಪುರದ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ ಜೆಡಿಎಸ್​ ಬೆಳ್ಳಿಹಬ್ಬದ ಅಂಗವಾಗಿ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆನಂದ್​, ಮುಖಂಡರಾದ ಪುಟ್ಟರಾಜು, ಸದಾಶಿವಯ್ಯ, ಮುನಿರಾಜು, ಕೆಂಪರಾಜು, ರಾಜಕುಮಾರ್​, ಮಂಜುಳಾ, ಅಶೋಕ್​, ರಮೇಶ್​, ನರಸಿಂಹಗೌಡ, ಚೌಡಪ್ಪ, ರಾಮಕೃಷ್ಣಪ್ಪ, ನಾಗರಾಜು, ನರಸಿಂಹಮೂರ್ತಿ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಮೇ 8ರಂದು ನಿಗದಿಯಾಗಿರುವ ಜೆಡಿಎಸ್​ ಬೆಳ್ಳಿಹಬ್ಬದ ತಯಾರಿ ನಡುವೆಯೇ ನೂತನ ತಾಲೂಕು ಪದಾಧಿಕಾರಿಗಳ ನೇಮಕ ಸಂಬಂಧ ಪಕ್ಷದೊಳಗೆ ಆಕ್ರೋಶ ವ್ಯಕ್ತವಾಗಿದೆ.
ಜೆಡಿಎಸ್​ ಬೆಳ್ಳಿಹಬ್ಬದ ಅಂಗವಾಗಿ ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆನಂದ್​, ತಾಲೂಕು ಪದಾಧಿಕಾರಿಗಳ ನೇಮಕಕ್ಕೆ ನಿಷ್ಠ್ಠಾವಂತ ಮುಖಂಡರವಿರೋಧವಿದೆ. ಸ್ಥಳಿಯ ನಾಯಕರ ಅಭಿಪ್ರಾಯ ಪಡೆದು ಪದಾಧಿಕಾರಿಗಳನ್ನು ನೇಮಕ ಮಾಡಬೇಕು. ಇಲ್ಲವಾದಲ್ಲಿ ಮೇ 8ರಂದು ತಾಲೂಕಿಗೆ ಆಗಮಿಸಲಿರುವ ನಿಖಿಲ್​ ಕುಮಾರಸ್ವಾಮಿಗೆ ಸ್ವಾಗತ, ಜೆಡಿಎಸ್​ ಜಿಲ್ಲಾಧ್ಯಕ್ಷರಿಗೆ ಧಿಕ್ಕಾರ ಎಂದು ಪ್ರಚಾರ ಮಾಡಲಾಗುವುದು. ನನ್ನನ್ನು ಮತ್ತು ಮುನೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು, ಇಲ್ಲವಾದರೆ ಜೆಡಿಎಸ್​ ಜಿಲ್ಲಾಧ್ಯಕ್ಷರ ಬದಲಾವಣೆ ಆಗಬೇಕು. ಅಲ್ಲಿಯವರೆಗೆ ಹೋರಾಟ ಮಾಡಲಾಗುವುದು ಎಂದರು.
ಸ್ಥಳಿಯ ನಾಯಕರ ಪಿತೂರಿಗಳಿಂದ ಮುನೇಗೌಡರಿಗೆ ಪದೇ ಪದೆ ಹಿನ್ನಡೆಯಾಗುತ್ತಿದೆ. ಜಿಲ್ಲಾಧ್ಯಕ್ಷರ ಆಯ್ಕೆಗೆ ವಿರೋಧ ಇಲ್ಲ. ಆದರೆ, ತಾಲೂಕು ಅಧ್ಯಕ್ಷರ ನೇಮಕದಲ್ಲಿ ಅನ್ಯಾಯ ಮಾಡಿದ್ದಾರೆ. ಕೋರ್​ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿಗೆ ಹಲವು ಸಲಹೆ ನೀಡಲಾಗಿತ್ತು. ಇದು ಹೀಗೆ ಮುಂದುವರಿದರೆ ಹೊಸಕೋಟೆ ೇತ್ರಕ್ಕಿಂತಲೂ ಕೆಳಹಂತಕ್ಕೆ ಜೆಡಿಎಸ್​ ಹೋಗಲಿದೆ ಎಂದರು.
ಮುಖಂಡ ಪುಟ್ಟರಾಜು ಮಾತನಾಡಿ, ಕಾರ್ಯಕರ್ತರ ಸಭೆ ಮಾಡಿ ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಹಾಲಿ ೂಷಿಸಿರುವ ಅಧ್ಯಕ್ಷ ಸೇರಿದಂತೆ ಇತರ ಪದಾಧಿಕಾರಿಗಳ ನೇಮಕಕ್ಕೆ ತಡೆ ನೀಡಿ, ಕಾರ್ಯಕರ್ತರ ಬಹಿರಂಗ ಸಭೆ ಮಾಡಿ ಆಯ್ಕೆ ಮಾಡಬೇಕು. ನಾನು ಯಾವುದೇ ಆಕಾಂಯಾಗಿರಲಿಲ್ಲ. ನನ್ನನ್ನು ಉಪಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಆಯ್ಕೆ ಪ್ರಕ್ರಿಯೆ ನನಗೆ ಗೊತ್ತೆ ಇಲ್ಲ. ಬೂತ್​ ಮಟ್ಟದಲ್ಲಿ ಪಕ್ಷ ಸಂಟನೆಗೆ ಆದ್ಯತೆ ನೀಡಬೇಕು. ನಮ್ಮ ತಾಲೂಕಿನಲ್ಲಿ ನಾಯಕರ ನಡುವೆ ಇರುವ ಗೊಂದಲಗಳನ್ನುಹೈಕಮಾಂಡ್​ ನಿವಾರಿಸಬೇಕು ಎಂದು ಕೋರ್​ ಕಮಿಟಿ ಅಧ್ಯಕ್ಷರಿಗೆ ಮನವಿ ಮಾಡಿದರು.
ಹಿರಿಯ ಮುಖಂಡ ನರಸಿಂಹಗೌಡ ಮಾತನಾಡಿ, ತಾಲೂಕಿನಲ್ಲಿ ಪಕ್ಷಕ್ಕಾಗಿ 25 ವರ್ಷಗಳಿಂದಲೂ ದುಡಿಯುತ್ತಿದ್ದೇವೆ. ಈವರೆಗೆ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ. ಕಾರ್ಯಕರ್ತರ ಅಭಿಪ್ರಾಯ ಪಡೆಯದೆ, ಕೆಲವೇ ಕೆಲವು ಮುಖಂಡರ ಆಣತಿಯಂತೆ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net