ಶಿರಾ: ಶಾಸಕ ಟಿ.ಬಿ.ಜಯಚಂದ್ರಗೆ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್ ಆಗ್ರಹಿಸಿದರು. ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಬರಗೂರು ನಟರಾಜ್ ಮಾತನಾಡಿ, ಕರ್ನಾಟಕದಲ್ಲಿ 60ಕ್ಕೂ ಹೆಚ್ಚು ತಾಲೂಕುಗಳಲ್ಲಿ ಕುಂಚಿಟಿಗರ ಮತ ನಿರ್ಣಾಯಕವಾಗಲಿದೆ. ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡದೆ ಇದ್ದರೆ ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಇದು ಪರಿಣಾಮ ಬೀರಲಿದೆ ಎಂದರು.
ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಮಾತನಾಡಿದರು. ಎನ್ಎಸ್ಯುಐ ಅಧ್ಯಕ್ಷ ರಂಗನಾಥ್, ಕೋಟೆ ಲೋಕೇಶ್, ಗುಳಿಗೇನಹಳ್ಳಿ ನಾಗರಾಜ್, ರೂಪೇಶ್ ಕೃಷ್ಣಯ್ಯ, ಶೇಷ ನಾಯಕ್, ಡಿ.ಸಿ.ಅಶೋಕ್ ಇದ್ದರು.