ಜಾನಕಿ ಭಾರತೀಯ ಚಿತ್ರರಂಗದ ಅಗ್ರಗಣ್ಯ ಗಾಯಕಿ

ಮಧುಗಿರಿ ತಾಲೂಕು ವಿಪ್ರ ಸೇವಾ ಟ್ರಸ್ಟ್​ ಆಶ್ರಯದಲ್ಲಿ ಆಯೋಜಿಸಿದ್ದ ಗಾನ ಕೋಗಿಲೆ ನುಡಿನಮನ ಕಾರ್ಯಕ್ರಮದಲ್ಲಿ ಟ್ರಸ್ಟ್​ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಬಿ.ಎಸ್​.ರವೀಶ್​, ಕೆ. ಶ್ರೀನಿವಾಸ ಮೂರ್ತಿ, ಮಧುಸೂದನ್​ ರಾವ್​, ನಾರಾಯಣ ಪ್ರಸಾದ್​, ಅಶೋಕ್​, ನಾಗಭೂಷಣ್​ ಇದ್ದರು.

Published on
 ಮಧುಗಿರಿ :ಗಾಯಕಿಯಾಗಿ ವೃತ್ತಿ ಆರಂಭಿಸಿದ ಎಸ್​.ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ಅಗ್ರಗಣ್ಯ ಗಾಯಕಿಯಾಗಿ ಮೆರೆದರು ಎಂದು ವಿಪ್ರ ಸೇವಾ ಟ್ರಸ್ಟ್​ ಅಧ್ಯಕ್ಷ ವಿದ್ವಾನ್​ ನಾಗರಾಜ ಶಾಸ್ತ್ರಿ ತಿಳಿಸಿದರು. 
ತಾಲೂಕಿನ ವಿಪ್ರ ಸೇವಾ ಟ್ರಸ್ಟ್​ ಆಶ್ರಯದಲ್ಲಿ ಆಯೋಜಿಸಿದ್ದ ಗಾನ ಕೋಗಿಲೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ 17 ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವುದು ಅವರ ಸಾಧನೆಯ ವೈಶಿಷ್ಟ$್ಯ ಎಂದರು.
ವಿಪ್ರ ಸೇವಾ ಟ್ರಸ್ಟ್​ ಖಜಾಂಚಿ ಆಡಿಟರ್​ ಲಕ್ಷಿ$್ಮ ಪ್ರಸಾದ್​ ಮಾತನಾಡಿ, ಎಸ್​.ಜಾನಕಿ ಅವರ ಪ್ರತಿಯೊಂದು ಹಾಡಿನಲ್ಲಿ ವಿಶಿಷ್ಟತೆ ಮತ್ತು ವಿಭಿನ್ನತೆ ಇರುತಿತ್ತು, ವಿಶ್ವದ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿಯರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದರು.
ಅಂಚೆ ಇಲಾಖೆ ಅಧಿಕಾರಿ ಜಯಶ್ರೀ ಮಾತನಾಡಿ, ದಕ್ಷಿಣ ಭಾರತದ ಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ಗಾಯಕಿ ಎಸ್​.ಜಾನಕಿ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನಮ್ಮನ್ನು ಅಗಲಿದ್ದರೂ ಅವರ ಸಾವಿರಾರು ಕಾಲತೀತ ಮಧುರ ಗೀತೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net