ಜಾನಕಿ ಭಾರತ ಚಿತ್ರರಂಗದ ಗಾನ ಗಂಧರ್ವಿ

ಸೇಡಂನಲ್ಲಿ ಖ್ಯಾತ ಗಾಯಕಿ ಎಸ್​.ಜಾನಕಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ರವಿ ಸಾಹು ನೀಲಹಳ್ಳಿ ಉದ್ಘಾಟಿಸಿದರು. ಶೋಭಾದೇವಿ ಚಕ್ಕಿ, ಆರತಿ ಕಡಗಂಚಿ, ಲ್ಮ ಸಿಂಪಿ ಇದ್ದರು.
ಸೇಡಂನಲ್ಲಿ ಖ್ಯಾತ ಗಾಯಕಿ ಎಸ್​.ಜಾನಕಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ರವಿ ಸಾಹು ನೀಲಹಳ್ಳಿ ಉದ್ಘಾಟಿಸಿದರು. ಶೋಭಾದೇವಿ ಚಕ್ಕಿ, ಆರತಿ ಕಡಗಂಚಿ, ಲ್ಮ ಸಿಂಪಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶೋಭಾದೇವಿ ಚಕ್ಕಿ ಬಣ್ಣನೆ
  • ಸೇಡಂನಲ್ಲಿ ಸಂಗೀತ ಕಾರ್ಯಕ್ರಮ
ಸೇಡಂ: ಸಂಗೀತ ಸರಸ್ವತಿ, ಕರ್ನಾಟಕದ ಕೋಗಿಲೆ ಎಂದೇ ಖ್ಯಾತರಾದ ಎಸ್​.ಜಾನಕಿ ಅವರು ಭಾರತ ಚಿತ್ರರಂಗದ ಗಾನ ಗಂಧರ್ವಿ ಎಂದು ನಿವೃತ್ತ ಪ್ರಾಧ್ಯಾಪಕಿ ಶೋಭಾದೇವಿ ಚಕ್ಕಿ ಬಣ್ಣಿಸಿದರು.
ಬ್ರಿಲಿಯಂಟ್​ ಶಾಲೆ ಆವರಣದಲ್ಲಿ ಶ್ರೀ ಸರಸ್ವತಿ ಸಂಗೀತ ಪಾಠ ಶಾಲೆಯಿಂದ ಖ್ಯಾತ ಹಿನ್ನಲೆ ಗಾಯಕಿ ಎಸ್​. ಜಾನಕಿ ಅಮ್ಮ ಅವರ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ ಮಾತನಾಡಿ, ಸಂಗೀತ ಲೋಕಕ್ಕೆ ಜಾನಕಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಅವರ ಜನ್ಮ ಭೂಮಿ ಆಂಧ್ರಪ್ರದೇಶವಾಗಿದ್ದರೂ ಕನ್ನಡ ನಾಡನ್ನು ಕರ್ಮ ಭೂಮಿಯನ್ನಾಗಿಸಿಕೊಂಡಿದ್ದರು. ಅವರಲ್ಲಿ ಕನ್ನಡ ಪ್ರೀತಿ ಅನುಪಮವಾಗಿತ್ತು. ಸಾವಿರಾರು ಕನ್ನಡ ಹಾಡುಗಳನ್ನು ಹಾಡಿದ್ದಾರೆ ಎಂದರು.
ಶಾಲೆಯ ಮುಖ್ಯಸ್ಥ ರವಿ ಸಾಹು ನೀಲಹಳ್ಳಿ ಉದ್ಘಾಟಿಸಿದರು.
ಶ್ರೀಮತಿ ನರ್ಮದಾ ದೇವಿ ಗಿಲಡಾ ಪದವಿ ಮಹಾವಿದ್ಯಾಲಯದ ಉಪ ಪ್ರಾಚಾಯೆರ್ ಆರತಿ ಕಡಗಂಚಿ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಭಾರತಿ ಹೊಲಿಗೆ ಕೇಂದ್ರದ ಪ್ರಾಚಾಯೆರ್ ಲ್ಮ ಸಿಂಪಿ, ಪ್ರಮುಖರಾದ ಮಹಾದೇವಿ ಚಂದನಕೇರಾ, ಉಮಾ ಊಡಗಿ, ಮಂಗಳಾ ನಾಸಿ, ಶಿವಲೀಲಾ ಹಲಕರ್ಟಿ, ಪ್ರೀತಿ ಬಿರಾದಾರ, ಶಾಂತಕುಮಾರ್​ ಕೋಕಟ್​ ಇತರರಿದ್ದರು.
ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳಾದ ಪಾವನಿ, ಪರಿಣಿತ, ಸಿಂಧು, ಪ್ರೇಮ, ಪ್ರೇಾ, ಗಾರ್ಗಿ, ಅದಿತಿ, ಸ್ವರೂಪ, ವೇದಾ, ಅನ್ವಿತ, ಅಭಿಸಾರಿಕಾ, ಸಾಯಿಪ್ರಿಯ, ರೀತಿಕಾ, ಶ್ರೀನಿಧಿ, ಅನ್ವೀರ್​ ಎಸ್​. ಅವರು ಜಾನಕಿ ಅವರು ಹಾಡುಗಳನ್ನು ಹಾಡಿ ಸಂಗೀತಾಸಕ್ತರ ಗಮನ ಸೆಳೆದರು. ದಯಾನಂದ ಜೇವರ್ಗಿ ಹಾಮೋರ್ನಿಯಂ, ರಮೇಶ ವಿಶ್ವಕರ್ಮ ತಬಲಾ ಸಾಥ್​ ನೀಡಿದರು.
ಲಲಿತಾ ಕೋಕಟ್​ ಪ್ರಾಸ್ತಾವಿಕ ಮಾತನಾಡಿದರು. ವನಿತಾ ನಿರೂಪಣೆ ಮಾಡಿದರು. ರೇಖಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net