ಮೆರವಣಿಗೆಯಲ್ಲಿ ಪುರದ ಬಸವೇಶ್ವರ ಬೆಳ್ಳಿರಥದ ಉತ್ಸವ, ನಂದಿ ಧ್ವಜಕುಣಿತ, ಲಿಂಗದ ವೀರರ ಕುಣಿತ, ನಾಸಿಕ್ ಡೋಲ್, ಡೊಳ್ಳುಕುಣಿತ, ತಮಟೆವಾದ್ಯ, ಚಿಟ್ಟೆಮೇಳ, ಎತ್ತು ಮತ್ತು ಕುದುರೆಗಳು ಸೇರಿದಂತೆ ಸಾಂಸತಿಕ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು. ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಸಾಂಪ್ರದಾಯಿಕ ಪೇಟಧರಿಸಿದ ಯುವತಿಯರು ಮೆರವಣಿಗೆಯಲ್ಲಿ ಗಮನ ಸೆಳೆದರು.