ಏ.14ರಂದು ಜಗಜೀವನ್​ ರಾಮ್​, ಅಂಬೇಡ್ಕರ್​ ಜಯಂತಿ

Jagjivan Ram, Ambedkar Jayanti on April 14
Jagjivan Ram, Ambedkar Jayanti on April 14
Published on
ಗೌರಿಬಿದನೂರು : ತಾಲೂಕು ಆಡಳಿತದಿಂದ ಏ.14ರಂದು ಡಾ.ಬಾಬು ಜಗಜೀವನ್​ ರಾಮ್​, ಅಂಬೇಡ್ಕರ್​ ಜಯಂತಿ ಆಚರಿಸಲಾಗುವುದು ಎಂದು ತಹಸೀಲ್ದಾರ್​ ಅರವಿಂದ್​ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಮತ್ತು ದಲಿತ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಲಿತ ಮುಖಂಡರು, ಸರ್ಕಾರಿ ಅಧಿಕಾರಿಗಳ ಜತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ದಲಿತ ಮುಖಂಡರು ನಗರದಲ್ಲಿ ಅಂಬೇಡ್ಕರ್​ ವೃತ್ತದಲ್ಲಿ ಅವರ ಪುತ್ತಳಿ ನಿರ್ಮಿಸಿ ಜಯಂತಿ ಮಾಡಬೇಕೆಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಅಧಿಕಾರಿ ಚೆನ್ನಪ್ಪ ಗೌಡ ಎಸ್​ ನಾಯಕರ್​, ದಲಿತ ಮುಖಂಡರಾದ ಎಂ.ಆರ್​.ಸತ್ಯನಾರಾಯಣ, ಎಚ್​.ಎನ್​.ಸನಂದಕುಮಾರ್​, ಟಿ.ಬಾಲಯ್ಯ, ಕಡಬೂರು ಅಶ್ವತಪ್ಪ, ಇಡುಗೂರು ಸೋಮಯ್ಯ, ವೈಟಿ ಪ್ರಸನ್ನ ಕುಮಾರ್​, ಮಲ್ಲಸಂದ್ರ ಗಂಗಾಧರಪ್ಪ, ಕಲ್ಲಿನಾಯಕನಹಳ್ಳಿ ಮುನಿಯಪ್ಪ, ನಾಗಾರ್ಜುನ, ಕೃಷ್ಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net