

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಡಿಕೆಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿಬುಧವಾರ ಸಂಜೆ 4ಕ್ಕೆಲೋಕಭವನದ ಗ್ಲಾಸ್ ಹೌಸ್‌ನಲ್ಲಿಪ್ರಮಾಣ ವಚನ ಸ್ವೀಕರಿಸಲಿದ್ದು,ಪ್ರಮಾಣ ವಚನಸಮಾರಂಭಕ್ಕೆ ಜಗದ್ಗುರುಪಂಚಪೀಠಾಧೀಶ್ವರರಿಗೆ ಆಹ್ವಾನನೀಡಲಾಗಿದೆ.ಆದರೆ ಪೂರ್ವನಿಗದಿಯಂತೆ ಎಲ್ಲ ಜಗದ್ಗುರುಗಳುವಿವಿಧ ಕಾರ್ಯಕ್ರಮಗಳಲ್ಲಿಭಾಗವಹಿಸುತ್ತಿರುವುದರಿಂದ ನೂತನಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆಜಗದ್ಗುರು ಪಂಚಪೀಠಾಧೀಶ್ವರರುಶುಭ ಕೋರಿದ್ದಾರೆ.
ಜಂಟಿಪತ್ರಿಕಾ ಹೇಳಿಕೆ ಬಿಡುಗಡೆಮಾಡಿರುವ ರಂಭಾಪುರಿ ಡಾ.ವೀರಸೋಮೇಶ್ವರಜಗದ್ಗುರುಗಳು,ಉಜ್ಜಯಿನಿ ಶ್ರೀಸಿದ್ಧಲಿಂಗ ಜಗದ್ಗುರುಗಳು,ಕೇದಾರ ಶ್ರೀಭೀಮಾಶಂಕರಲಿಂಗ ಜಗದ್ಗುರುಗಳು,ಶ್ರೀಶೈಲಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಜಗದ್ಗುರುಗಳುಕಾಶಿ ಪೀಠದ ಡಾ.ಚಂದ್ರಶೇಖರಶಿವಾಚಾರ್ಯ ಜಗದ್ಗುರುಗಳು ಮತ್ತುಡಾ.ಮಲ್ಲಿಕಾರ್ಜುನವಿಶ್ವಾರಾಧ್ಯ ಜಗದ್ಗುರುಗಳು,ಧರ್ಮದಲ್ಲಿರಾಜಕೀಯ ಇರಬಾರದು ಆದರೆ ರಾಜಕೀಯದಲ್ಲಿಧರ್ಮವಿರಬೇಕು ಎಂಬ ತತ್ವವನ್ನುಅರಿತಿರುವ ಡಿ.ಕೆ.ಶಿವಕುಮಾರ್ರಾಜ್ಯದ ಮುಖ್ಯಮಂತ್ರಿಗಳಾಗುತ್ತಿದ್ದು,ಉತ್ತಮ ಆಡಳಿತದಮೂಲಕ ರಾಜ್ಯದ ಜನರ ಸೇವೆ ಮಾಡಲಿ.ಜಾತಿ,ಮತ,ಪಂಥ,ಭಾಷೆ ಇತ್ಯಾದಿಎಲ್ಲ ಭೇದ ಬಾವಗಳನ್ನು ತೊಡೆದುಸರ್ವರನ್ನು ಸಮಾನವಾಗಿ ಕಂಡು,ಸರ್ವಜನಾಂಗದವರಿಗೂಸಮಾನ ಅವಕಾಶ ನೀಡುವ ಆಡಳಿತ ನೀಡಲಿಎಂದು ಶುಭ ಹಾರೈಸಿದ್ದಾರೆ.
ಶ್ರೀರಂಭಾಪುರಿಲಿಂಗೈಕ್ಯ ಜಗದ್ಗುರು ವೀರಗಂಗಾಧರಅಜ್ಜಯ್ಯನವರ ಪರಮ ಶಿಷ್ಯರಾಗಿರುವಶಿವಕುಮಾರ್ ಅವರು "ಮಾನವಧರ್ಮಕ್ಕೆ ಜಯವಾಗಲಿ,ಧರ್ಮದಿಂದಲೇವಿಶ್ವಕ್ಕೆ ಶಾಂತಿ"ಎಂಬ ಮಹೋನ್ನತಸಂದೇಶವನ್ನು ಸಾಕಾರಗೊಳಿಸುವವಿಶ್ವಾಸ ವ್ಯಕ್ತಪಡಿಸಿರುವಪಂಚಪೀಠಾಧೀಶ್ವರರು,ಇದೇ ವೇಳೆಮುಖ್ಯಮಂತ್ರಿಗಳ ನೂತನ ಸಂಪುಟಕ್ಕೆಸೇರ್ಪಡೆಗೊಳ್ಳುವ ಎಲ್ಲ ಸಚಿವರಿಗೂಶುಭ ಕೋರಿದ್ದಾರೆ.