ಮಳೆ ಮತ್ತು ಥಂಡಿ ವಾತಾವರಣದಿಂದ ನೆಗಡಿ, ಕೆಮ್ಮು, ಕಫ, ಜ್ವರ ಮುಂತಾದ ಸಮಸ್ಯೆಗಳು ಜಾಸ್ತಿ ಕಾಣಿಸುತ್ತದೆ. ಈಗಾಗಲೇ ಬೇರೆ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಮೇಲೂ ಈ ಹವಾಮಾನ ಪರಿಣಾಮ ಬೀರುತ್ತದೆ. ಹೀಗಾಗಿ, ಪ್ರತಿದಿನ ಬೆಚ್ಚಗಿರಬೇಕು. ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಲು ಕೊಡೆ ಅಥವಾ ರೈನ್ಕೋಟ್ ಬಳಸಲು, ಕುದಿಸಿ ಆರಿಸಿದ ನೀರನ್ನು ಮಾತ್ರ ಬಳಕೆ ಮಾಡಲು ವೈದರು ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಸೋಂಕಿನ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕೆಮ್ಮುವಾಗ ಬಾಯಿ ಮುಚ್ಚಿಕೊಳ್ಳಲು ಮತ್ತು ಸೀನುವಾಗ ಕರ್ಚೀಪ್ ಉಪಯೋಗಿಸಲು ವೈದ್ಯರು ಸಲಹೆ ನೀಡಿದ್ದಾರೆ.