ಹೌದು, ರಾಕೇಶ್ ಎಂಬುವರು ಹೆಚ್ಚು ಸಂಬಳ ಪಡೆಯುವ ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿ, ಆಟೋ ಚಾಲಕನಾಗಿ ಹೊಸ ಜೀವನ ಆರಂಭಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಣವೇ ಮುಖ್ಯವಲ್ಲ, ಹಣದಿಂದಾಚೆಗೆ ಹೆಚ್ಚಿನ ಗುರಿಗಳನ್ನು ಹೊಂದಬೇಕು ಮತ್ತು ಯಾವುದೇ ಬಿಕ್ಕಟ್ಟುಗಳಿಗೆ ಎದೆಗುಂದಬಾರದು ಎಂಬ ಸಂದೇಶವನ್ನು ಸಾರಿರುವ ರಾಕೇಶ್, ಸಾವಿರಾರು ಜನರಿಗೆ ಸ್ಫೂರ್ತಿ ನೀಡಿದ್ದಾರೆ.