ಅಂತೂ ಸೇತುವೆ ದುರಸ್ತಿಗೆ ಕೂಡಿ ಬಂದ ಕಾಲ

ಕೆಂಭಾವಿ ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯ ಸುರಪುರ&ಹುನಗುಂದ ರಾಜ್ಯ ಹೆದ್ದಾರಿ ಸೇತುವೆ ದುರಸ್ತಿಗೆಯನ್ನು  ಲೋಕೋಪಯೋಗಿ ಇಲಾಖೆ ಮಾಡುತ್ತಿರುವುದು.
ಕೆಂಭಾವಿ ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯ ಸುರಪುರ&ಹುನಗುಂದ ರಾಜ್ಯ ಹೆದ್ದಾರಿ ಸೇತುವೆ ದುರಸ್ತಿಗೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿರುವುದು.
Published on
ಕೆಂಭಾವಿ: ಪಟ್ಟಣದ ನಾರಾಯಣಪುರ ಮುಖ್ಯ ಕಾಲುವೆಯ ಮೇಲಿರುವ ಸೇತುವೆ ದುರಸ್ತಿಗೆ ಅಂತೂ ಕಾಲ ಕೂಡಿ ಬಂದಿದ್ದು ಬುಧವಾರ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಸುರಪುರ&ಹುನಗುಂದ ರಾಜ್ಯ ಹೆದ್ದಾರಿಯ ಈ ಕಾಲುವೆ ಸೇತುವೆ ಅನೇಕ ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಸುಗಮ ಸಂಚಾರಕ್ಕೆ ಸಂಚಕಾರ ಬಂದೊದಗಿತ್ತು. ಈ ಕುರಿತು ವಿಜಯವಾಣಿ ಅನೇಕ ಬಾರಿ ವರದಿ ಕೂಡ ಮಾಡಿತ್ತು. ಇದೇ ಮುಖ್ಯ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು, ಜನರು, ಶಾಲಾ ವಾಹನಗಳು ಸಂಚಾರ ಮಾಡುತ್ತಿದ್ದು ಇದರ ಮೇಲೆ ಸಂಚರಿಸಬೇಕಾದರೆ ಜೀವ ಕೈಯ್ಯಲ್ಲಿ ಹಿಡಿದು ಹೋಗುವಂತಾಗಿತ್ತು. ಮಳೆಯಾದರಂತೂ ಈ ಬ್ರಿಜ್​ ಸಂಪೂರ್ಣ ಕೆರೆಯಂತಾಗಿ ಸಂಚಾರ ಬಂದ್​ ಆಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ಶಾಸಕರ, ಸ್ಥಳಿಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದ ಸ್ಥಳಿಯರು ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ವಿಜಯವಾಣಿ ನಿರಂತರ ಸುದ್ದಿ ಪ್ರಕಟಿಸಿ ಅಧಿಕಾರಿಗಳನ್ನು ಎಚ್ಚರಿಸಿತ್ತು.
ಅನುಮಾನ ಮೂಡಿದ ದುರಸ್ತಿ ಕಾರ್ಯ:
ಬುಧವಾರದಿಂದ ಪ್ರಾರಂಭವಾದ ಸೇತುವೆ ದುರಸ್ತಿ ಕಾರ್ಯಕ್ಕೆ ಹಲವು ವಾಹನ ಸವಾರರು ಮತ್ತು ಜನತೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದು ಸೇತುವೆ ಮೇಲೆ ಕೇವಲ ಕಂಕರ ಹಾಕಿ ಟ್ರಾಕ್ಟರ್​ ಮೂಲಕ ರಸ್ತೆ ಸರಿಪಡಿಸುತ್ತಿದ್ದು ಇದು ತಾತ್ಕಾಲಿಕವೊ ಅಥವಾ ಶಾಶ್ವತವೊ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೀಗ ಮಳೆಗಾಲ ಆರಂಭವಾಗಿದ್ದು ಈ ಸೇತುವೆ ಸಂಪೂರ್ಣ ತಗ್ಗು ಪ್ರದೇಶದಿಂದ ಕೂಡಿದೆ. ಈ ದುರಸ್ತಿ ತಾತ್ಕಾಲಿಕವಾಗಿದ್ದಲ್ಲಿ ಮಳೆ ನೀರಿನಿಂದ ಮತ್ತೆ ತುಂಬಿ ಹದಗೆಡುವುದೆಂಬ ಅನುಮಾನ ಜನರನ್ನು ಕಾಡುತ್ತಿದೆ. ಇಲಾಖೆ ಈ ಸೇತುವೆಯನ್ನು ಅಚ್ಚುಕ್ಟಾಗಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು ಮತ್ತು ಅಪಘಾತಗಳನ್ನು ತಪ್ಪಿಸಲು ಸಹಾಯ ಮಾಡಬೇಕು ಎಂಬುದು ಜನರ ಒತ್ತಾಯವಾಗಿದೆ.
"

ಸೇತುವೆ ದುರಸ್ತಿ ಕಾರ್ಯ ಕೇವಲ ತಾತ್ಕಾಲಿಕವಾಗಿದ್ದು, ಮಳೆಗಾಲ ಮುಗಿದ ತಕ್ಷಣ ಈ ಸೇತುವೆ ಮರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನೀರಾವರಿ ಇಲಾಖೆ ನಮ್ಮ ಇಲಾಖೆಗೆ ಈ ಸೇತುವೆ ಕಾರ್ಯ ಹಸ್ತಾಂತರಿಸಿದ್ದು ಶ್ರೀ ಈ ಸೇತುವೆ ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಲಾಗುವುದು.

— > ಎಸ್​.ಜಿ.ಪಾಟೀಲ್​ ಇಇ ಲೋಕೋಪಯೋಗಿ ಇಲಾಖೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net