ಶಿರಾ ಪ್ರವಾಸಿ arasu ಮಂದಿರದಲ್ಲಿ ನಮ್ಮ ಅರಸು ಪುಸ್ತಕವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹಸ್ತಾಂತರಿಸಿದರು. ಸಾಹಿತಿಗಳಾದ ಭುವನಹಳ್ಳಿ ನಾಗರಾಜ್, ಲೇಖಕಿ ಶೈಲಾ ನಾಗರಾಜ್, ಕೊಟ್ಟ ಶಂಕರ್, ವೈ.ನರೇಶ್ ಬಾಬು ಇದ್ದರು.
Published on:
Copied
Follow Us
ಶಿರಾ: ಅತ್ಯಂತ ಸಣ್ಣ ಸಮುದಾಯದ ಯುವಕರನ್ನು ರಾಜಕೀಯಕ್ಕೆ ಕರೆತಂದು ಶಾಸಕರನ್ನಾಗಿಸಿದ arasu ಕೀರ್ತಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರದ್ದು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಹಕಾರ ರತ್ನ ಎಸ್.ಎನ್ ಕೃಷ್ಣಯ್ಯ ಫೌಂಡೇಷನ್ನಿಂದ ನಮ್ಮ ಅರಸು ಪುಸ್ತಕವನ್ನು ಹಿಂದುಳಿದ ವರ್ಗಗಳ ವಸತಿ ನಿಲಯ ಮತ್ತು ಗ್ರಂಥಾಲಯಗಳಿಗೆ ಕೊಡುಗೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿ, ರಾಜ್ಯದಲ್ಲಿ ಸಾಮಾಜಿಕ ಪಲ್ಲಟಗಳನ್ನೇ ಉಂಟು ಮಾಡಿದ ಭೂ ಸುಧಾರಣಾ ಕಾಯ್ದೆ ಅರಸು ಅವರ ಕನಸಿನ ಕೂಸು. ರಾಜಕೀಯ ಆಯಾಮಗಳೊಟ್ಟಿಗೆ ಸಾಮಾಜಿಕ ಹಾಗೂ ಸಾಂಸತಿಕ ಆಯಾಮಗಳೂ ಸೇರಿಕೊಂಡಿದ್ದ ಅರಸು ಅವರು ತಮ್ಮ ಮುಖ್ಯಮಂತ್ರಿ ಸ್ಥಾನದ ಅವಧಿಯಲ್ಲಿ ಅವರ ನೇತೃತ್ವದಲ್ಲಿ ರಚನೆಯಾದ ಅಕಾಡೆಮಿಗಳಿಗೆ ಸ್ವಾಯತ್ತತೆಗಳನ್ನು ನೀಡಿದ್ದರು.
ಅನುಮತಿ ಇಲ್ಲದೆ ಯಾರಾದರೂ ಅರಣ್ಯ ಪ್ರವೇಶ ಮಾಡಿ ಮರ ಕಡಿಯುವುದು ಅಕ್ಷಮ್ಯ ಅಪರಾಧ ಅನ್ನುವುದರ ಕಠಿಣ ಕ್ರಮಗಳಿದ್ದ ಮೊದಲ ಕಾಯಿದೆ ತಂದದ್ದು ಅರಸು ಎಂದು ಬಣ್ಣಿಸಿದರು.
ಫೌಂಡೇಷನ್ನ ಬಿ.ಎಸ್.ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ವಡ್ನಪ್ಪ, ಸಿಗಲಹಳ್ಳಿ ಮೂರ್ತಿ, ಗಂಗಾಧರ್, ಧರಣಿ ಕುಮಾರ್ ಇದ್ದರು.