ಸರ್ವೇ ನಡೆಸದೆ ಜಮೀನು ತೆರವುಗೊಳಿಸುವುದು ಸರಿಯಲ್ಲ survey

ಸರ್ವೇ ನಡೆಸದೆ ಜಮೀನು ತೆರವುಗೊಳಿಸುವುದು ಸರಿಯಲ್ಲ survey
ಸರ್ವೇ ನಡೆಸದೆ ಜಮೀನು ತೆರವುಗೊಳಿಸುವುದು ಸರಿಯಲ್ಲ survey
Published on
ಮುಳಬಾಗಿಲು: ತಾಲೂಕಿನಲ್ಲಿ ಅರಣ್ಯ ಇಲಾಖೆ ರೈತರ ಜಮೀನನ್ನು ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರಿಗೆ ಮಾಹಿತಿ ನೀಡದೆ ತೆರವಿಗೆ ಮುಂದಾಗಿರುವುದು ಸರಿಯಲ್ಲ ಎಂದು ಕಾಂಗ್ರೆಸ್​ ಮುಖಂಡ ಹೆಬ್ಬಣಿ ಎಂ.ಗೋಪಾಲ್​ ಅಸಮಾಧಾನ ವ್ಯಕ್ತಪಡಿಸಿದರು.survey
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್​ ವಿ.ಗೀತಾ ಅಧ್ಯತೆಯಲ್ಲಿ ಆಯೋಜಿಸಿದ್ದ ರೈತ ಕುಂದು, ಕೊರತೆಗಳ ಸಭೆಯಲ್ಲಿ ಮಾತನಾಡಿ, ಅರಣ್ಯ ಇಲಾಖೆ ರೈತರು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಏಕಾಏಕಿಯಾಗಿ ವಶಕ್ಕೆ ಪಡೆಯುತ್ತಿರುವುದು ಸರಿಯಲ್ಲ. ಒತ್ತುವರಿ ಆದ ಜಮೀನುಗಳನ್ನು ವಶಕ್ಕೆ ಪಡೆಯಬೇಕಾದರೆ ಸರ್ವೇ ನಡೆಸಬೇಕು. ಒತ್ತುವರಿದಾರರಿಗೆ ಮುಂಚಿತವಾಗಿ ನೋಟಿಸ್​ ಜಾರಿ ಮಾಡಬೇಕು. ಇವು ಯಾವುದನ್ನು ಅರಣ್ಯ ಇಲಾಖೆ ಗಣನೆಗೆ ತೆಗೆದುಕೊಂಡಿಲ್ಲ. ಕಂದಾಯ ಇಲಾಖೆಯ ಜತೆಗೆ ಜಂಟಿ ಸರ್ವೇ ಮಾಡದೆ ತಮಗೆ ಇಷ್ಟಬಂದಂತೆ ಒತ್ತುವರಿ ಮಾಡುತ್ತಿರುವುದು ನಿಜಕ್ಕೂ ರೈತ ವಿರೋಧಿ ಹಾಗೂ ಕಾನೂನು ಬಾಹಿರ ಆಗಿದೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್​ ನೇತೃತ್ವದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ಈ ವಿಚಾರದ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net