ರಾಜಕೀಯ ಅಸ್ತಿತ್ವಕ್ಕಾಗಿ ನನ್ನ ವಿರುದ್ದ ಟೀಕೆ ಮಾಡುವುದು ನಿಮಗೆ ಅನಿವಾರ್ಯ
Priyank Kharge
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಚಲವಾದಿ ನಾರಾಯಣಸ್ವಾಮಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು.
ಕಲಬುರಗಿ : ಚಲವಾದಿ ನಾರಾಯಣಸ್ವಾಮಿಯವರು ನನ್ನ ಬಗ್ಗೆ ಬಗೆಬಗೆಯ ಮಾತುಗಳನ್ನಾಡಿದ್ದಾರೆ, ಬಹುಷಃ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಗ್ಗೆ ಮಾತನಾಡುವುದು ಅವರಿಗೆ ಅನಿವಾರ್ಯ, ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯದ ಕೊನೆಯ ದಿನವಾಗುತ್ತದೆ ಎಂದು ಗ್ರಾಮಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
RSS ನವರ ಚಡ್ಡಿಗಳನ್ನು ತಲೆ ಮೇಲೆ ಹೊತ್ತು ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಬದಲು ನನ್ನ ತಂದೆಯವರ ಸೈದ್ದಂತಿಕ ನೆರಳಿನಲ್ಲಿ ಮುಂದುವರೆಯುವುದು ಅತ್ಯಂತ ಗೌರವಯುತ ರಾಜಕಾರಣ ಎಂದು ಭಾವಿಸಿದ್ದೇನೆ.
ವಂಶಪರಂಪರೆಯ ರಾಜಕಾರಣದ ಬಗ್ಗೆ ಮಾತನಾಡಲೇಬೇಕು ಎಂದಿದ್ದರೆ ತಮ್ಮದೇ ಪಕ್ಷದ ಅಧ್ಯಕ್ಷರಾದ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾದ ಅರವಿಂದ್ ಬೆಲ್ಲದ್ ಅವರಿಂದ ಮಾತನಾಡಲು ಶುರು ಮಾಡಲಿ, ಆ ಧೈರ್ಯ ನಾರಾಯಣಸ್ವಾಮಿಯವರಿಗಿದೆಯೇ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ,
ದಲಿತತ್ವ ಎಂದರೆ ಸ್ವಾಭಿಮಾನ,
ದಲಿತತ್ವ ಎಂದರೆ ಅನ್ಯಾಯಕ್ಕೆ ಪ್ರತಿರೋಧ,
ದಲಿತತ್ವ ಎಂದರೆ ಆತ್ಮಬಲ.
"
ದಲಿತತ್ವದ ಸ್ವಾಭಿಮಾನವನ್ನು ಆರ್ಎಸ್ಎಸ್ ನವರ ಚಡ್ಡಿಗಳಿಗೆ ಅಡ ಇಟ್ಟವರು ದಲಿತತ್ವದ ಪಾಠ ಹೇಳುವುದು ಕುಚೋದ್ಯವಲ್ಲದೆ ಇನ್ನೇನು! ಎಂದು ತಿರುಗೇಟು ನೀಡಿದ್ದಾರೆ.