ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ / NANDAGUDI

ನಂದಗುಡಿಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪೋಲಿಯೋ ಅಭಿಯಾನಕ್ಕೆ ಸಿಎಚ್​ಒ ಡಾ.ವೀಣಾ ಚಾಲನೆ ನೀಡಿದರು. ಹಿರಿಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್​ ಶಾಹೀನ, ಆರೋಗ್ಯ ಶುಶ್ರೂಕಿಯರಾದ ಗೀತಾ, ಶಶಿ, ಶಾಮಲಾ, ಗೀತಾ ಇತರರು ಇದ್ದರು.
ನಂದಗುಡಿಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಪೋಲಿಯೋ ಅಭಿಯಾನಕ್ಕೆ ಸಿಎಚ್​ಒ ಡಾ.ವೀಣಾ ಚಾಲನೆ ನೀಡಿದರು. ಹಿರಿಯ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್​ ಶಾಹೀನ, ಆರೋಗ್ಯ ಶುಶ್ರೂಕಿಯರಾದ ಗೀತಾ, ಶಶಿ, ಶಾಮಲಾ, ಗೀತಾ ಇತರರು ಇದ್ದರು.
Published on
ನಂದಗುಡಿ : ದೇಶದ ಅಭಿವೃದ್ಧಿಯಲ್ಲಿ ನಮ್ಮ ಆರೋಗ್ಯ ಪ್ರಮುಖ ಪಾತ್ರ ವಹಿಸಲಿದ್ದು, ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಪೋಲಿಯೋಮುಕ್ತರಾಗಲು ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್​ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಸಿಎಚ್​ಒ ಡಾ.ವೀಣಾ ಹೇಳಿದರು.
ನಂದಗುಡಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೋಲಿಯೋ ಅಭಿಯಾನದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿ ಮಾತನಾಡಿದ ಅವರು, ಮನುಷ್ಯ ಆರೋಗ್ಯವಾಗಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಮಕ್ಕಳು ವಿಕಲಾಂಗರಾಗದಿರಲು ಪಲ್ಸ್​ ಪೋಲಿಯೋ ಹಾಕಿಸುವುದು ಅಗತ್ಯ ಎಂದರು.
ನಂದಗುಡಿ ಹೋಬಳಿ ವ್ಯಾಪ್ತಿಗೆ ಒಳಪಡುವ ಇಟ್ಟಸಂದ್ರ, ನೆಲವಾಗಿಲು, ನಂದಗುಡಿ, ಕಂಬಳೀಪುರ, ದೊಡ್ಡಹರಳಗೆರೆ 5 ಗ್ರಾಪಂನ 45 ಹಳ್ಳಿಗಳು ವ್ಯಾಪ್ತಿಗೆ ಒಳಪಡಲಿದ್ದು, ಅಂಗನವಾಡಿ ಕೇಂದ್ರಗಳು ಸೇರಿ 13 ಬೂತ್​ಗಳನ್ನು ತೆರೆಯಲಾಗಿದೆ. 3 ಸೂಪರ್​ ವೈಸರ್​, ಆರೋಗ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರ 52 ಜನರ ತಂಡ ರಚಿಸಲಾಗಿದೆ ಎಂದರು.
2,470 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಸಮುದಾಯದ ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವ ಮೂಲಕ ಪ್ರತಿಯೊಬ್ಬರೂ ಪೋಲಿಯೋ ನಿಮೂರ್ಲನೆಗೆ ಕೈ ಜೋಡಿಸಬೇಕು ಎಂದರು. ಆಶಾ ಕಾರ್ಯಕರ್ತೆಯರಾದ ಆಯೀಷಾ, ಕಮಲಾ, ಕೃಪಾವತಿ, ಗೀತಾ, ಸಹಾಯಕರಾದ ಮಂಜುನಾಥ್​, ನವೀನ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net