ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಸಲಹೆಗಾರ ಎಂ.ಟಿ.ನವೀನ್ಕುಮಾರ್ ಮಾತನಾಡಿ, ಸಂಸ್ಥೆಯಿಂದ ಶಿಶುಗಳ ಆರೈಕೆ ಕೇಂದ್ರಕ್ಕೆ ವಾಟರ್ ಪ್ಲಾಂಟ್ ವಿತರಣೆ ಮಾಡಲಾಗಿದ್ದು, ಶಿಕ್ಷಕರು ಮಕ್ಕಳಿಗೆ ಶುದ್ಧ ಕುಡಿಯುವ ನೀರು ನೀಡಬೇಕು. ಆರೋಗ್ಯವಂತ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮುಖ್ಯವಾಗಿದ್ದು, ಹೆಚ್ಚು ಹೆಚ್ಚು ನೀರು ಕುಡಿಯಲು ಶಿಕ್ಷಕರು ಪಾಲಕರಿಗೆ ನಿರ್ದೇಶನ ನೀಡಬೇಕು ಎಂದರು. ನಿಯೋಜಿತ ಅಧ್ಯಕ್ಷ ಹನುಮಂತರಾಜು, ನಿರ್ದೇಶಕ ನಟರಾಜು, ನಿರ್ದೇಶಕ ಪ್ರಸನ್ನಕುಮಾರ್, ವಿಜಯ್ಕುಮಾರ್, ಸಲಹೆಗಾರ ಎಂ.ಟಿ.ನವೀನಕುಮಾರ್, ಶಿಶುಪಾಲನ ಕೇಂದ್ರ ಸಹಾಯಕಿ ಮಂಜುಳಾ, ವಿನುತಾ ಇತರರು ಇದ್ದರು.