ಕನ್ನಡ ಉಳಿಸಿ ಬೆಳೆಸುವ ಕಾರ್ಯ ಎಲ್ಲರ ಕರ್ತವ್ಯ

ಭಾಲ್ಕಿಯ ವಿದ್ಯಾಭಾರತಿ ಪಬ್ಲಿಕ್​ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಡಿವೈಎಸ್​ಪಿ ಬಲ್ಲಪ್ಪ ನಂದಗಾವಿ, ರೋಹಿತ್​ ವೈರಾಗೆ ಇತರರದ್ದರು.
ಭಾಲ್ಕಿಯ ವಿದ್ಯಾಭಾರತಿ ಪಬ್ಲಿಕ್​ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಡಿವೈಎಸ್​ಪಿ ಬಲ್ಲಪ್ಪ ನಂದಗಾವಿ, ರೋಹಿತ್​ ವೈರಾಗೆ ಇತರರದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗಭೂಷಣ ಮಾಮಡಿ ಅಭಿಮತ
  • ಭಾಲ್ಕಿಯಲ್ಲಿ ಪತ್ರಿಕಾ ದಿನಾಚರಣೆ
ಭಾಲ್ಕಿ: ಕರ್ನಾಟಕದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಕಸಾಪ ಸೇರಿ ನಾಡಿನ ಸಮಸ್ಥ ಕನ್ನಡಿಗರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಹೇಳಿದರು.
ಪಟ್ಟಣದ ವಿದ್ಯಾಭಾರತಿ ಪಬ್ಲಿಕ್​ ಶಾಲೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್​, ರಾಜ್ಯ ಸರ್ಕಾರಿ ನೌಕರರ ಸಂಘ, ಆದರ್ಶ ಶಿಕ್ಷಣ ಸಂಸ್ಥೆ ಹಾಗೂ ಬಸವ ಭಾಗ್ಯ ಎಜುಕೇಶನ್​ ಮತ್ತು ಚಾರಿಟೇಬಲ್​ ಟ್ರಸ್ಟ್​ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಉಳಿಸಿ ಬೆಳೆಸುವುದು ಎಲ್ಲ ಕನ್ನಡಿಗರ ಕನಸಾಗಿದೆ. ಹಿರಿಯರು ಭಾಷಾವಾರು ಪ್ರಾಂಗಳ ವಿಂಗಡನೆಯಲ್ಲಿ ಕನ್ನಡ ಮಾತನಾಡುವ ಗಡಿ ಭಾಗದಲ್ಲಿರುವ ನಮಗೆ ಕರ್ನಾಟಕದಲ್ಲಿ ಉಳಿಯುವಂತೆ ಮಾಡಿರುವುದು ನಮ್ಮೆಲ್ಲರ ಪುಣ್ಯ, ಇದನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ. ಬೇರೆ ಭಾಷೆಗಳನ್ನು ನಾವು ಗೌರವಿಸೋಣ ಅದರ ಜತೆಗೆ ಕನ್ನಡತನ ಮರೆಯಬಾರದು. ಪತ್ರಕರ್ತರು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಸ್​ಪಿ ಬಲ್ಲಪ್ಪ ನಂದಗಾವಿ, ಪತ್ರಕರ್ತರು ಜಾತಿ, ಧರ್ಮಗಳಿಂದ ವಿಮುಕ್ತರಾಗಿ ಸಾಮಾಜಿಕ ಚಿಂತಕರಾಗಿ ಕಾರ್ಯನಿರ್ವಹಿಸಬೇಕು.ಪೋಸ್ಕೋ ಕಾಯಿದೆ ಸೇರಿ ಹಲವು ವರದಿಗಳಲ್ಲಿ ಗೌಪ್ಯತೆಗಳನ್ನು ಕಾಪಾಡಿಕೊಂಡು ಹೋಗುವು ಕಾರ್ಯ ಪತ್ರಕರ್ತರದ್ದಾಗಿದೆ. ತಕ್ಷಣ ಸುದ್ದಿಗಳನ್ನು ಮುಟ್ಟಿಸುವ ಧಾವಂತದಲ್ಲಿ ಸತ್ಯವನ್ನು ಮರೆಮಾಚಬಾರದು ಎಂದು ಹೇಳಿದರು. .
ವಿದ್ಯಾಭಾರತಿ ಪಬ್ಲಿಕ್​ ಶಾಲೆಯ ಮುಖ್ಯಶಿಕ್ಷಕ ರೋಹಿತ್​ ವೈರಾಗೆ ಮಾತನಾಡಿದರು. ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಅಶೋಕ ರಾಜೋಳೆ ಪತ್ರಿಕಾರಂಗ ಬೆಳೆದು ಬಂದ ದಾರಿಯ ಬಗ್ಗೆ ಬೆಳಕು ಚೆಲ್ಲಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೆಪ್ಪ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ ಬಿಜಿಪಾಟೀಲ ಇದ್ದರು.
ರೋಹಿತ ವೈರಾಗೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಸಂತೋಷ ಬಿಜಿಪಾಟೀಲ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಿರಿಯ ಪತ್ರಕರ್ತರಾದ ಗಣಪತಿ ಬೋಚರೆ, ವಿಜಯಕುಮಾರ ಪಮಾರ್, ರಾಜೇಶ ಮುಗಟೆ ಸೇರಿ ೆ ಕಾರ್ಯನಿರತ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net