

ಅಫಜಲಪುರ: ಸಾರ್ವಜನಿಕ ಸೇವೆಗೆ ಅತ್ಯಂತ ಹತ್ತಿರವಿರುವ ಪುರಸಭೆಯಲ್ಲಿ ಮೂರು ದಶಕ ಕಾಲ ನಿಷ್ಠೆಯಿಂದ ಸೇವೆಸಲ್ಲಿಸಿದ ಸಂತೃಪ್ತಿ ನನಗಿದೆ ಎಂದು ಸೇವಾ ನಿವೃತ್ತದ ಸಮುದಾಯ ಸಂಟನಾಧಿಕಾರಿ ಅಶೋಕ ಬಿಲಗುಂದಿ ಹೇಳಿದರು. ಪುರಸಭೆ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ನೇರವಾಗಿ ಸಾರ್ವಜನಿಕರಿಗೆ ತಲುಪಿಸುವುದು ಸರ್ಕಾರಿ ಸೇವೆಯಲ್ಲಿರುವ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯ ಸಿದ್ದರಾಮ ಗಣಾಚಾರಿ, ಮಾಜಿ ಸದಸ್ಯರಾದ ಮಲ್ಲಯ್ಯ ಹೊಸಮಠ, ರಾಜುಗೌಡ ಪಾಟೀಲ್, ಮುಖ್ಯಾಧಿಕಾರಿ ಫಕ್ರುದ್ದಿನ್ ಸಾಬ್, ಜಿಲ್ಲಾ ಪೌರ ಕಾರ್ಮಿಕ ಸಂದ ಅಧ್ಯ ಮುತ್ತಣ್ಣ ಭಂಡಾರಿ, ಪ್ರಮುಖರಾದ ಜಟ್ಟೆಪ್ಪ ಜಾಮಗೊಂಡ, ಸಂತೋಷ ಚಲವಾದಿ, ಗುರು ಸೂಲೇಕಾರ, ಭೀಮರಾಯ ಸುಮನ, ಮೇನಾ, ರೇಖಾ, ಕವಿತಾ, ಭೀಮಾಶಾ ಆರೇಕರ, ಅನಿತಾ ಮ್ಯಾಕೆರಿ, ರಾಜು ಜಮಾದಾರ, ಸುರೇಶ ಯಾತನೂರ ಇತರರಿದ್ದರು.