ನಮ್ಮ ರಕ್ತದಿಂದ ಮತ್ತೊಬ್ಬರ ಜೀವ ಉಳಿಯುತ್ತದೆ ಎಂಬುದು ಹೆಮ್ಮೆಯ ವಿಷಯ: ಮಾಜಿ ಸಚಿವ ಅರವಿಂದ ಲಿಂಬಾವಳಿ

ರಕ್ತದಾನ ಶಿಬಿರದಲ್ಲಿ ಪಾಲ್ಗೋಂಡಿದ್ದ  ರಕ್ತದಾನಿಗಳಿಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಶಂಸ ಪತ್ರ ನೀಡಿ ಗೌರವಿಸಿದರು. ಅಧ್ಯಕ್ಷ ಶ್ರೀಧರ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ವೈಟ್ ಫೀಲ್ಡ್ ಎಸ್.ಬಿ.ಪಿ ಪ್ರಭು, ಶ್ರೀನಿವಾಸ್, ಯೋಗೇಶ್, ನಂಜೇ ಗೌಡ, ಯುವಮೋರ್ಚಾ ಅಧ್ಯಕ್ಷರು ನವೀನ್,  ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಮಹದೇವಪುರ : ನಮ್ಮ ರಕ್ತದಿಂದ ಮೊತ್ತೊಬ್ಬರ ಜೀವ ಉಳಿಯುತ್ತದೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಹಿಗಾಗಿ ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಪ್ರಾಣ ಉಳಿಸುವುದರ ಜತೆಗೆ ನಮ್ಮ ದೇಹದಲ್ಲಿನ  ಬೇಡವಾದಂಹ ಕೊಬ್ಬಿನ ಅಂಶ ತೆಗೆದುಹಾಕಲು ಸಹಾಯಕಾರಿಯಾಗುತ್ತದೆ. ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
 ಸ್ವಾಮಿ ವಿವೇಕಾನಂದರ ಜಯಂತಿಯ ಹಿನ್ನಲೆಯಲ್ಲಿ  ಕ್ಷೇತ್ರದ ನಗರ ಮಂಡಲ ಯುವಮೋರ್ಚಾ ವತಿಯಿಂದ ಹಗದೂರು ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ರಾಷ್ಟ್ರೋತ್ಥಾನ ರಕ್ತ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.  
ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದಾನ ಅವಶ್ಯಕತೆ ಹೆಚ್ಚಾಗಿರುತ್ತದೆ, ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗ ಬೇಕು. ಯುವಕರು ರಕ್ತದಾನ ಮಾಡುವುದರಿಂದ ಆರೋಗ್ಯವಂತರಾಗಿರಲು  ಸಹಕಾರಿಯಾಗುತ್ತದೆ ಎಂದು ಹೇಳಿದರು.  
ಸದೃಢ ಹಾಗೂ ಸುಶಕ್ತ ಸಮಾಜ ನಿರ್ಮಾಣದಲ್ಲಿ ಯುವಕರು ಮುಂಚೂಣಿಯಲ್ಲಿ ನಿಂತಿದ್ದಾರೆ. ರಕ್ತದಾನ ಶಿಬಿರ ನಡೆಸಿರುವುದು ಹೆಮ್ಮೆಯ ಮತ್ತು ಶ್ಲಾಘನೀಯ ಕಾರ್ಯ ಶಿಬಿರವನ್ನು ಯಶಸ್ವಿಗೊಳಿಸಿದ ಯುವಮೋರ್ಚಾ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.ನಂತರ ಶಿಬಿರದಲ್ಲಿ   ರಕ್ತದಾನ ಮಾಡಿದವರಿಗೆ ಹಣ್ಣುಹಂಪಲು ವಿತರಿಸಿ, ಪ್ರಶಂಸೆ ಪತ್ರ ನೀಡಿ ಗೌರವಿಸಿದರು.
ಈ ವೇಳೆನಗರ ಮಂಡಲ ಅಧ್ಯಕ್ಷ ಶ್ರೀಧರ ರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ವೈಟ್ ಫೀಲ್ಡ್ ಎಸ್.ಬಿ.ಪಿ ಪ್ರಭು, ಶ್ರೀನಿವಾಸ್, ಯೋಗೇಶ್, ನಂಜೇ ಗೌಡ, ಯುವಮೋರ್ಚಾ ಅಧ್ಯಕ್ಷರು ನವೀನ್,  ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net