ಅಹವಾಲು ಅರ್ಜಿ ವಿತರಣೆ / VIJAYAPUR

ವಿಜಯಪುರ ಪುರಸಭೆ ಕಚೇರಿಯಲ್ಲಿ ಪ್ರಜಾ ಸೇವಾ ಆಂದೋಲನದ ಪ್ರಯುಕ್ತ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅಹವಾಲು ಅರ್ಜಿಗಳನ್ನು ವಿತರಿಸಲಾಯಿತು.
ವಿಜಯಪುರ ಪುರಸಭೆ ಕಚೇರಿಯಲ್ಲಿ ಪ್ರಜಾ ಸೇವಾ ಆಂದೋಲನದ ಪ್ರಯುಕ್ತ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅಹವಾಲು ಅರ್ಜಿಗಳನ್ನು ವಿತರಿಸಲಾಯಿತು.
Published on
ವಿಜಯಪುರ : ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜಿಲ್ಲೆಯ ಮೊದಲ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಂದು ಕೊರತೆ ಬಗ್ಗೆ ಲಿಖಿತ ದೂರು ನೀಡಲು ಸಾರ್ವಜನಿಕರಿಗೆ ಪುರಸಭೆಯಿಂದ ಫಾಮ್​ರ್ಗಳನ್ನು ವಿತರಿಸಲಾಯಿತು.
ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ್​ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಪರಿಹಾರ ಸೂಚಿಸಲು ಪ್ರಜಾ ಸೇವಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ.
ಸಾರ್ವಜನಿಕರು ಪಿಂಚಣಿ, ವಸತಿ/ ನಿವೇಶನ, ಗ್ಯಾರಂಟಿ ಯೋಜನೆ, ಪಹಣಿ, ಪೋಡಿ, ಖಾತೆ ಬದಲಾವಣೆ, ಹೊಸ ಪಡಿತರ ಚೀಟಿ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಾಲಯಗಳ ಜೀಣೋರ್ದ್ಧಾರ, ಸರ್ಕಾರಿ ಶಾಲೆ, ಅಂಗನವಾಡಿ ಅಭಿವೃದ್ಧಿ, ವಿಬಿ ಜಿ ರಾಮ್​ ಜಿ ಯೋಜನೆ, ಪೋಲಿಸ್​ ಸೇವೆ, ಖಾಸಗಿ ಉದ್ಯೋಗ ಸೇರಿದಂತೆ ಸರ್ಕಾರ ಯಾವುದೇ ಸೇವೆಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಅರ್ಜಿಯನ್ನು ಭರ್ತಿ ಮಾಡಿ ಕೊಟ್ಟು ಸ್ಥಳದಲ್ಲಿಯೇ ಪರಿಹಾರ ಪಡೆಯಬಹುದು ಎಂದು ತಿಳಿಸಿದರು. ಈಗಾಗಲೇ ಅರ್ಜಿಗಳನ್ನು ವಿತರಿಸಲಾಗಿದ್ದು, ಕಾರ್ಯಕ್ರಮದ ದಿನದಂದೂ ಪಡೆಯಬಹುದು ಎಂದು ತಿಳಿಸಿದರು.
ಪುರಸಭೆ ರೋಜ್ಗಾರ್​ ಯೋಜನೆ ಅಧಿಕಾರಿ ಬಾಲಚಂದ್ರ, ಕಂದಾಯ ಅಧಿಕಾರಿ ಶಿವನಾಗೇಗೌಡ, ಪ್ರಥಮ ದರ್ಜೆ ಗುಮಾಸ್ತರಾದ ರತ್ನಮ್ಮ, ಹೇಮಾ, ಜನಾರ್ದನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net