ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದ ಚರಿತಾಮೃತಮ್ ಕನ್ನಡ ಮಹಾಕಾವ್ಯ ಬಿಡುಗಡೆ

ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಕುರಿತ ಕನ್ನಡ ಮಹಾಕಾವ್ಯವನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಉಡುಪಿ ಅಧಮಾರು ಶ್ರೀಗಳು, ಶ್ರೀಮಧುಪಂಡಿತ ದಾಸ, ಡಾ.ಗುರುರಾಜ ಕರ್ಜಗಿ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತಿತರರಿದ್ದರು.
ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದರ ಕುರಿತ ಕನ್ನಡ ಮಹಾಕಾವ್ಯವನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಉಡುಪಿ ಅಧಮಾರು ಶ್ರೀಗಳು, ಶ್ರೀಮಧುಪಂಡಿತ ದಾಸ, ಡಾ.ಗುರುರಾಜ ಕರ್ಜಗಿ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಸ್ಕಾನ್ ಸಂಸ್ಥಾಪಕ ಶ್ರೀಲ ಪ್ರಭುಪಾದ ಚರಿತಾಮೃತಮ್
  • ಕನ್ನಡ ಮಹಾಕಾವ್ಯ ಬಿಡುಗಡೆ ಸಮಾರಂಭ ನಡೆಯಿತು
  • ಅಷ್ಟಾದಶಪದಿ ಗೀತಮಾಲ ಛಂದಸ್ಸಿನಲ್ಲಿ ರಚನೆಗೊಂಡ ಕೃತಿ

ಬೆಂಗಳೂರು: ಜಗತ್ತಿನಲ್ಲಿಸಾಮಾನ್ಯವಾಗಿ ವ್ಯಕ್ತಿಗಳುಮತ್ತು ಗ್ರಂಥಗಳ ನೆನಪು ದಿನಕಳೆದಂತೆ ಕಡಿಮೆಯಾಗುತ್ತವೆ.ಆದರೆ ಕೆಲವ್ಯಕ್ತಿಗಳು,ಗ್ರಂಥಗಳ ಮಹತ್ವದಿನ ಕಳೆದಂತೆ ಹೆಚ್ಚುತ್ತಾಹೋಗುತ್ತದೆ ಎಂದು ಶಿಕ್ಷಣತಜ್ಞಡಾ.ಗುರುರಾಜಕರ್ಜಗಿ ಹೇಳಿದರು.

ಇಸ್ಕಾನ್ದೇವಾಲಯ ಹಮ್ಮಿಕೊಂಡಿದ್ದಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದಚರಿತಾಮೃತಮ್ ಕನ್ನಡ ಮಹಾಕಾವ್ಯಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಶ್ರೀರಾಮ9 ಸಾವಿರವರ್ಷಗಳ ಹಿಂದಿದ್ದವನು,ಶ್ರೀಕೃಷ್ಣ 5ಸಾವಿರ ವರ್ಷಹಿಂದಿದ್ದವನು.ಆದರೆ ಇಂದಿಗೂಮರೆತಿಲ್ಲ. ಭಗವದ್ಗೀತೆ ಸಾವಿರಾರು ವರ್ಷ ಕಳೆದರೂ ಅದರಮಹತ್ವ ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗಿದೆ.ಇದಕ್ಕೆ ಕಾರಣಅದರಲ್ಲಿರುವ ಶಕ್ತಿ.ಅಂತೆಯೇ ಇಸ್ಕಾನ್ಸಂಸ್ಥಾಪಕರಾದ ಶ್ರೀಲ ಪ್ರಭುಪಾದರನ್ನುಯಾರೂ ನೋಡಿಲ್ಲ.ಆದರೆ ಅವರು ಮಾಡಿದನಾಮಸಂಕೀರ್ತನಾ ಆಂದೋಲನಜಗತ್ತಿನೆಲ್ಲೆಡೆ ಇಂದಿಗೂ ಅವರನ್ನುನೆನಪಿನಲ್ಲಿಟ್ಟುಕೊಳ್ಳುವಂತೆಮಾಡಿದೆ. ಇದುಭಾರತೀಯ ಆಧ್ಯಾತ್ಮಿಕತೆಯಲ್ಲಿರುವಶಕ್ತಿ ಎಂದು ಕರ್ಜಗಿ ವಿವರಿಸಿದರು.

ಸಾನ್ನಿಧ್ಯವಹಿಸಿದ್ದ ಉಡುಪಿಯ ಅದಮಾರು ಮಠದಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು,ಶ್ರೀಲ ಪ್ರಭುಪಾದರಅಸಾಧಾರಣ ಸಾಧನೆ ಇಂದಿಗೂ ಜನಮಾನಸಕ್ಕೆಪ್ರೇರಣೆಯಾಗಿದೆ.ಇಸ್ಕಾನ್ ಬೆಂಗಳೂರುಸಂಸ್ಥೆ ಅವರ ಹಾದಿಯನ್ನೇ ಅನುಸರಿಸಿಹರಿನಾಮ ಸಂಕೀರ್ತನೆ,ಪುಸ್ತಕ ವಿತರಣೆಮತ್ತು ಅನ್ನದಾನದಂತಹ ಕಾರ್ಯಕ್ರಮಗಳಮೂಲಕ ವಿಶ್ವಮಟ್ಟದಲ್ಲಿ ಗಮನಸೆಳೆದಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿಇಸ್ಕಾನ್ ಉಪಾಧ್ಯಕ್ಷ ಚಂಚಲಪತಿದಾಸ, ಮೈಸೂರುಇಸ್ಕಾನ್ ಮುಖ್ಯಸ್ಥ ಶ್ರೀ ಸೋಕಕೃಷ್ಣಸ್ವಾಮಿ,ಕೃತಿಯ ಲೇಖಕಡಾ.ಕಬ್ಬಿನಾಲೆವಂಸತ ಭಾರದ್ವಾಜ್,ಡಾ.ನಾ.ಸೋಮೇಶ್ವರ,ಉಪನ್ಯಾಸಕಿ ಡಾ.ಜ್ಯೋತಿ ಶಂಕರ್ಮತ್ತಿತರರು ಪಾಲ್ಗೊಂಡಿದ್ದರು.

ಅಷ್ಟಾದಶಪದಿಗೀತಮಾಲ ಕಾವ್ಯ

ರಾಜ್ಯೋತ್ಸವಪ್ರಶಸ್ತಿ ಹಾಗೂ ಕನ್ನಡ-ತುಳುಸಾಹಿತ್ಯ ಅಕಾಡೆಮಿ ಪ್ರಶಸ್ತಿಪುರಸ್ಕೃತರಾದ ಕವಿ ಡಾ.ಕಬ್ಬಿನಾಲೆವಸಂತ ಭಾರದ್ವಾಜ್ ಅವರು ಶ್ರೀಲಪ್ರಭುಪಾದರ ಚರಿತಾಮೃತಮ್ ಕನ್ನಡಮಹಾಕಾವ್ಯವನ್ನು ರಚಿಸಿದ್ದಾರೆ.ಅಪರೂಪದ ಅಷ್ಟಾದಶಪದಿಗೀತಮಾಲಾ ಛಂದಸ್ಸಿನಲ್ಲಿರಚಿತವಾಗಿರುವ ಈ ಕಾವ್ಯಗ್ರಂಥ,ಪ್ರಾಚೀನ ಮತ್ತುಆಧುನಿಕ ಕನ್ನಡದ ಸೊಗಡನ್ನುಸಂಯೋಜಿಸಿಕೊಂಡು ಸಾಂಪ್ರದಾಯಿಕಗಮಕ ಶೈಲಿಯಲ್ಲಿ ಮೂಡಿಬಂದಿದೆ.

ಶ್ರೀಲ ಪ್ರಭುಪಾದ ಚರಿತಾಮೃತ ಕನ್ನಡ ಮಹಾಕಾವ್ಯವು ಪ್ರಭುಪಾದರ ಕೃಷ್ಣಪ್ರಜ್ಞಾ ಪ್ರಚಾರ ಮತ್ತು ಅವರ ಅಪ್ರತಿಮ ಸಾಧನೆಗಳನ್ನು ಕನ್ನಡ ಜನಮಾನಸಕ್ಕೆ ಪರಿಚಯಿಸುವ ಅಮೂಲ್ಯ ಗ್ರಂಥವಾಗಿದೆ. ಪ್ರಭುಪಾದರ ಭಕ್ತಿ, ತ್ಯಾಗ, ಜಾಗತಿಕ ಪ್ರಭಾವ ಮತ್ತು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಈ ಕೃತಿ ಮನೋಜ್ಞವಾಗಿ ಬಿಂಬಿಸುತ್ತದೆ.

— ಶ್ರೀ ಮಧುಪಂಡಿತ ದಾಸ, ಇಸ್ಕಾನ್ ಅಧ್ಯಕ್ಷರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net