ಜನತೆಗೆ ಗೀತೆಯ ಸಾರ ಮುಟ್ಟಿಸುತ್ತಿರುವ ಈಶ್ವರೀಯ ವಿವಿ

ಗುಂಡ್ಲುಪೇಟೆಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಗಂಗಾಧರಸ್ವಾಮೀಜಿ ಚಾಲನೆ ನೀಡಿದರು. ಎನ್.ಜಯಕುಮಾರ್, ಶಿವಪ್ರಸಾದ್(ರಾಜು), ಪ್ರಭಾಮಣೀಜಿ ವೀಣಾಜೀ ಇದ್ದರು.
ಗುಂಡ್ಲುಪೇಟೆಯ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಗಂಗಾಧರಸ್ವಾಮೀಜಿ ಚಾಲನೆ ನೀಡಿದರು. ಎನ್.ಜಯಕುಮಾರ್, ಶಿವಪ್ರಸಾದ್(ರಾಜು), ಪ್ರಭಾಮಣೀಜಿ ವೀಣಾಜೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋಪಾಲಪುರ ಗಂಗಾಧರಸ್ವಾಮೀಜಿ
  • ಪುರಸಭೆ ಬಯಲು ರಂಗ ಮಂದಿರ
ಗುಂಡ್ಲುಪೇಟೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೀತೆಯ ಸಾರ ಹಾಗೂ ಶಿವಶರಣರ ವಚನಗಳನ್ನು ಸರಳೀಕರಿಸಿ ಜನತೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ ಎಂದು ಗೋಪಾಲಪುರ ಗಂಗಾಧರಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಭಗವದ್ಗೀತೆಯ ಸಾರ, ಚಿಂತಾಮಕ್ತ ಮತ್ತು ಬಂಧನ ಮುಕ್ತ ಜೀವನಕ್ಕೆ ಆಧಾರ ಹಾಗೂ ಶರಣರ ಶಿವಯೋಗ ಪ್ರವಚನ ಮಾಲೆಗೆ ಚಾಲನೆ ನೀಡಿ ಮಾತನಾಡಿದರು. ಚಿಂತೆ ಯಾರನ್ನೂ ಬಿಡುವುದಿಲ್ಲ. ಆದರೆ ಶಿವನ ಚಿಂತನದಲ್ಲಿ ಪರಿವರ್ತನೆ ಮಾಡಿಕೊಳ್ಳುವುದೇ ರಾಜಯೋಗ ಶಿಕ್ಷಣದ ಉದ್ದೇಶ ಬ್ರಹ್ಮಾಕುಮಾರಿಯರ ಉದ್ದೇಶವಾಗಿದೆ. ಒಂದು ವಾರ ಪೂರ್ತಿ ನಡೆಯುವ ಪ್ರವಚನ ಮಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು. ಆಧ್ಯಾತ್ಮದ ಬಗ್ಗೆ ತಿಳಿದುಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಮಣೀಜಿ ಮಾತನಾಡಿ, ಭಗವದ್ಗೀತೆಯ ಸಾರ ಸುಖ ಮತ್ತು ನೆಮ್ಮದಿಯ ಜೀವನಕ್ಕೆ ಆಧಾರವಾಗಿದೆ. ಭಗವದ್ಗೀತೆಯಿಂದ ಮನಸ್ಸಿಗೆ ಶಾಂತಿ ಪ್ರಾಪ್ತಿಯಾಗುತ್ತದೆ. ಇಂದಿನಿಂದ ಪ್ರತಿನಿತ್ಯ ಸಂಜೆ 6 ರಿಂದ 7:30ರ ವರೆಗೆ ವಾರ ಕಾಲ ಪ್ರವಚನ ನಡೆಯಲಿದ್ದು, ಇದರ ಪೂರ್ಣ ಲಾಭವನ್ನು ತಾಲೂಕು ಮತ್ತು ಪಟ್ಟಣದ ಜನತೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಟ್ಟದಮಾದಹಳ್ಳಿಯ ಬಸವೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಪ್ರಭಾಮಣೀಜಿ ವೀಣಾಜೀ, ಸರ್ಕಲ್ ಇನ್‌ಸ್ಪೆಕ್ಟರ್ ಎನ್.ಜಯಕುಮಾರ್, ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶಿವಪ್ರಸಾದ್(ರಾಜು), ಓಂ ಶಾಂತಿ ನ್ಯೂಸ್ ಸರ್ವಿಸ್‌ನ ಬಿ.ಕೆ.ಆರಾಧ್ಯ, ನಾಗಣ್ಣ, ರಾಜು, ಗುರುಸ್ವಾಮಿ, ಸರೋಜಮ್ಮ, ಮಹಾಲಕ್ಷ್ಮೀ, ಸಂತೋಷ್, ಶ್ರೀನಿವಾಸ್, ಮಹೇಶ್, ಸಿದ್ದೇಶ್ವರಸ್ವಾಮೀಜಿ, ವರನಾಗಭೂಷಣ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net