ಈಶಾ ಫೌಂಡೇಶನ್ ಸಂಚಾಲಕಿ ಸುಜಾತಾ ಮಾತನಾಡಿ, ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಕ್ರೀಡಾ ಕ್ರೀಡಾಪಟುಗಳನ್ನು ಒಂದೆಡೆ ತಂದು, ಗ್ರಾಮಾಂತರ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮುಂದುವರಿಸುತ್ತಿದೆ ಎಂದರು.
ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈಶಾ ಫೌಂಡೇಶನ್‌ನನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಇದು ಪ್ರತಿಭಾವಂತ ಕ್ರೀಡಾಪಟುಗಳು ಉತ್ಸಾಹವನ್ನು ಬಿಂಬಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಶರ್ಮ, ಸುಬ್ರಹ್ಮಣ್ಯ, ಸುಜಾತಾ ಆರ್.ಶೆಟ್ಟಿ, ಪಿ.ವಿಕ್ರಮ್, ಡಾ.ಮೋಹನ್‌ಸಿಂಗ್, ನಂಜುಂಡೇಶ್ವರ, ಉಮಾಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.