ನೀರಾವರಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಎಚ್ಚರಿಕೆ

ಕವಿತಾಳ ಹತ್ತಿರದ ಹಾಲಾಪುರ-ಸಾನಬಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಳಿ ರೈತರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಮೌನೇಶ, ಮಲ್ಲಯ್ಯ, ರಡ್ಡೆಪ್ಪಗೌಡ, ಬಸಯ್ಯಸ್ವಾಮಿ, ಯಲ್ಲಪ್ಪ, ಗ್ಯಾರಂಟಿ ಸಮಿತಿ ಸದಸ್ಯ ಚನ್ನಬಸವ, ಮೌನೇಶ ಬಡಿಗೇರ, ಶ್ರೀಕಾಂತ, ಮಾಳಪ್ಪ, ಮಾಳಿಂಗರಾಯ, ಮಲ್ಲಯ್ಯ, ಬಸನಗೌಡ, ವೀರನಗೌಡ, ಯಂಕನಗೌಡ ಇತರರಿದ್ದರು.

Published on
ಕವಿತಾಳ: ತುಂಗಭದ್ರಾ ಎಡದಂಡೆ ಕಾಲುವೆಯ 65ನೇ ಉಪನಾಲೆ ಬಳಿ ಹಾಲಾಪುರ-ಸಾನಬಾಳ ಗ್ರಾಮಗಳಿಗೆ ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು.
ಎರಡ್ಮೂರು ದಶಕಗಳಿಂದ ಸೇತುವೆ ನಿರ್ಮಿಸಬೇಕು ಎಂದು ಹೋರಾಟ ಮಾಡಿದ್ದರಿಂದ ನಾಲ್ಕು ವರ್ಷಗಳ ಹಿಂದೆ  ಶಾಸಕ ಬಸನಗೌಡ ತುರ್ವಿಹಾಳ ಕಾಮಗಾರಿಗೆ ಚಾಲನೆ ನೀಡಿದ್ದರು.
ಆದರೆ, ಗುತ್ತಿಗೆದಾರರು ಈವರೆಗೆ ಸೇತುವೆ ನಿರ್ಮಿಸಿಲ್ಲ. ಹೀಗಾಗಿ ಹೋರಾಟ ಮುಂದುವರೆಸುತ್ತೇವೆ. ಸೇತುವೆ ನಿರ್ಮಾಣವಾಗದ ಕಾರಣ 8 ಕಿಮೀ ಸುತ್ತುಬಳಸಿ ನಮ್ಮ ಹೊಲಗಳಿಗೆ ಹೋಗುವ ಪರಿಸ್ಥಿತಿ ಇದೆ. ಮುಂಗಾರು ಶುರುವಾಗಲಿದ್ದು, ಇನ್ನೊಂದು ವಾರದಲ್ಲಿ ಕಾಮಗಾರಿ ಶುರು ಮಾಡಬೇಕು. ಇಲ್ಲದಿದ್ದರೆ ಕವಿತಾಳದಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  
ಈ ವೇಳೆ ಮಸ್ಕಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಚನ್ನಬಸವ ಅವರು ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮಿ ಅವರಿಗೆ ಕರೆ ಮಾಡಿ ಮಾತನಾಡಿದರು. ಗುತ್ತಿಗೆದಾರರಿಗೆ ಐದಾರು ಸಲ ನೋಟಿಸ್ ನೀಡಲಾಗಿದೆ. ವಾರದಲ್ಲಿ ಕಾಮಗಾರಿ ಆರಂಭ ಮಾಡದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ವಿಜಯಲಕ್ಷ್ಮೀ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net