ಬಾಸ್​ ಚಿತ್ರ ಬಿಡುಗಡೆಯಾದರೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂದು ದರ್ಶನ್ ವಕೀಲರ ವಾದ| High court

ನಟ ದರ್ಶನ್
ನಟ ದರ್ಶನ್
Published on

ಪ್ರಮುಖ ಮುಖ್ಯಾಂಶಗಳು

  • ನಟನ ಬಗ್ಗೆ ಉಲ್ಲೇಖ ಇಲ್ಲ ಎಂದ ನಿರ್ಮಾಪಕರು
ಬೆಂಗಳೂರು: ಬಾಸ್​ ಚಿತ್ರದ ಟೀಸರ್​ ಮತ್ತು ರೇಣುಕಾಸ್ವಾಮಿ ಕೊಲೆ ಪ್ರಕರಣದ ಟನೆಗಳ ನಡುವೆ ಮೇಲ್ನೋಟಕ್ಕೆ ಸಾಮ್ಯತೆಗಳಿದ್ದು, ಇದು ಸಾಗಳ ಮೇಲೆ ಪ್ರಭಾವ ಬೀರಬಹುದು. ಮರಣದಂಡನೆ ಜಾರಿಗೊಳಿಸಿದ ನಂತರ ಅದನ್ನು ಹಿಂಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದ ದರ್ಶನ್​ ಪರ ವಕೀಲರು, ಅದೇ ರೀತಿಯಲ್ಲಿ ಚಿತ್ರ ಬಿಡುಗಡೆಯಿಂದ ನಟನಿಗೆ ಸರಿಪಡಿಸಲಾಗದ ಹಾನಿಯಾಗಲಿದೆ ಎಂದು ಹೈಕೋರ್ಟ್​ನಲ್ಲಿ ವಾದಿಸಿದ್ದಾರೆ.
ಚಿತ್ರ ಬಿಡುಗಡೆಗೆ ಅನುಮತಿ ನೀಡಿದ ಮ್ಯಾಜಿಸ್ಟ್ರೆಟ್​ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಟ ದರ್ಶನ್​ ದಂಪತಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದಿಪ್​ ಸಿಂಗ್​ ಯೆರೂರ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಬಾಸ್​ ಚಲನಚಿತ್ರ ಬಿಡುಗಡೆಯಾಗದಿದ್ದರೆ ಅದರ ನಿರ್ಮಾಪಕರಿಗೆ ಆರ್ಥಿಕ ನಷ್ಟ ಮಾತ್ರ ಆಗಲಿದೆ. ಆದರೆ, ಅದು ಬಿಡುಗಡೆಯಾದರೆ ನಟ ದರ್ಶನ್​ ಅವರ ನ್ಯಾಯಾಯುತ ವಿಚಾರಣೆಯ ಹಕ್ಕಿಗೆ ಧಕ್ಕೆ ತರುತ್ತದೆ. ಚಿತ್ರ ತಂಡದ ಪ್ರಮಾಣಪತ್ರವೊಂದನ್ನೇ ಆಧಾರವಾಗಿಟ್ಟುಕೊಂಡು ವಿಚಾರಣಾ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು ತಪ್ಪು ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು. 

ನಿಮಾರ್ಪಕರ ವಾದ:

ಚಿತ್ರ ತಂಡದ ಪರವಾಗಿ ವಾದ ಮಂಡಿಸಿದ ವಕೀಲರು, ಬಾಸ್​ ಚಿತ್ರವು ಸಂಪೂರ್ಣ ಕಾಲ್ಪನಿಕ ಕಥೆಯಾಗಿದ್ದು, ನಟ ದರ್ಶನ್​ ಅವರ ಜೀವನಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದಲ್ಲಿ ನಟನ ಯಾವುದೇ ವೈಯಕ್ತಿಕ ಮಾಹಿತಿ, ಛಾಯಾಚಿತ್ರ ಅಥವಾ ಕುಟುಂಬದ ವಿವರಗಳನ್ನು ಬಳಸಲಾಗಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯಗಳನ್ನು ಚಲನಚಿತ್ರದಲ್ಲಿ ಚಿತ್ರಿಸುವುದರಿಂದ ವಿಚಾರಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸುಪ್ರೀಂಕೋರ್ಟ್​ ಈ ಹಿಂದೆ ಸ್ಪಷ್ಟಪಡಿಸಿದೆ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ವಿಷಯಗಳ ಮೇಲೆ ಗೌಪ್ಯತೆಯ ಹಕ್ಕು ಸಾಧಿಸಲಾಗದು ಎಂದು ವಾದಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net