ಕಡೆಚೂರು ಘಟನೆ ಶೀಘ್ರ ತನಿಖೆಗೊಳಪಡಿಸಿ

ಗುರುಮಠಕಲ್ ತಾಲೂಕಿನ ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಾದ ಘಟನಾ ಸ್ಥಳಕ್ಕೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ನೇತೃತ್ವದ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲಿಸಿತು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶ್‌ರಡ್ಡಿ ಮುದ್ನಾಳ್, ಪರಶುರಾಮ್ ಕುರಕುಂದಿ, ಸ್ವಾಮಿದೇವ ದಾಸನಕೇರಾ, ಅಮೃತ ಬೋರಬಂಡ, ದೇವರಾಜ ಹುಳೆಸೂಗರ್, ಜಗದೀಶ ಮೆಂಜಿ, ಶೇಖರ ಕಡೇಚೂರು, ಭೀಮು ಬಾಡಿಯಾಳ, ಅಯ್ಯಪ್ಪ ಬಾಡಿಯಾಳ, ಜಗದೀಶ ಪವಾರ್ ಇತರರಿದ್ದರು.
ಗುರುಮಠಕಲ್ ತಾಲೂಕಿನ ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಾದ ಘಟನಾ ಸ್ಥಳಕ್ಕೆ ಮಾಜಿ ಸಂಸದ ಡಾ.ಉಮೇಶ್ ಜಾಧವ್ ನೇತೃತ್ವದ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲಿಸಿತು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶ್‌ರಡ್ಡಿ ಮುದ್ನಾಳ್, ಪರಶುರಾಮ್ ಕುರಕುಂದಿ, ಸ್ವಾಮಿದೇವ ದಾಸನಕೇರಾ, ಅಮೃತ ಬೋರಬಂಡ, ದೇವರಾಜ ಹುಳೆಸೂಗರ್, ಜಗದೀಶ ಮೆಂಜಿ, ಶೇಖರ ಕಡೇಚೂರು, ಭೀಮು ಬಾಡಿಯಾಳ, ಅಯ್ಯಪ್ಪ ಬಾಡಿಯಾಳ, ಜಗದೀಶ ಪವಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಡಾ.ಉಮೇಶ ಜಾಧವ್ ಆಗ್ರಹ
  • ಘಟನಾ ಸ್ಥಳಕ್ಕೆ ಬಿಜೆಪಿ ನೇತೃತ್ವದ ತಂಡ ಭೇಟಿ ಪರಿಶೀಲನೆ
ಯಾದಗಿರಿ :

ಕಡೆಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ವಿಷಾನಿಲ ಸೋರಿಕೆಯಿಂದ ಮೂವರು ಮೃತಪಟ್ಟ ಈ ಘಟನೆ ತುರ್ತು ಸಮಸ್ಯೆ ಎಂದು ಘೋಷಿಸಿ ಕೂಡಲೇ ಸರ್ಕಾರ ಸಮಗ್ರ ತನಿಖೆಗೊಳಪಡಿಸಬೇಕು ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಒತ್ತಾಯಿಸಿದರು.

ಶುಕ್ರವಾರ ಡಾ.ಉಮೇಶ ಜಾಧವ್ ನೇತೃತ್ವದ ಬಿಜೆಪಿ ತಂಡ ಸ್ಥಳಕ್ಕೆ ಭೇಟಿ ನೀಡಿ, ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿನ ಪರಿಸರ ಮಾಲಿನ್ಯ ಕುರಿತು ಪರಿಶೀಲಿಸಿ ಅವರು ಮಾತನಾಡಿದರು. ಈ ಘಟನೆ ಸರ್ಕಾರದ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ದುರಂತ ನಡೆದ ಕೈಗಾರಿಕಾ ಕಂಪನಿಯಲ್ಲಿ ಒಟ್ಟು ೩೫ ಜನ ಕಾರ್ಮಿಕರದ್ದು ಒಬ್ಬ ಎಚ್‌ಆರ್ ಮತ್ತು ಒಬ್ಬ ಮ್ಯಾನೇಜರ್ ಕೆಲಸ ನಿರ್ವಹಿಸುತ್ತಿದ್ದು ದುರಂತ ಘಟನೆಯಲ್ಲಿ ಮಧ್ಯಪ್ರದೇಶದ ಇಬ್ಬರು ಹಾಗೂ ತೆಲಂಗಾಣದ ಒಬ್ಬರು ಜೀವ ಕಳೆದುಕೊಂಡಿz್ದÁರೆ ಎಂದರು.
ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದು ಮೂವರು ಗಾಯಗೊಂಡಿz್ದÁರೆ. ಕಾರ್ಮಿಕ ಹಾಗೂ ಪರಿಸರ ಮಾಲಿನ್ಯ ಕಾನೂನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕೈಗಾರಿಕಾ ಪ್ರದೇಶದ ಕಂಪನಿಯಿAದ ಇಂತಹ ದುರಂತ ಸಂಭವಿಸಿದೆ. ಯಾದಗಿರಿ, ಗುರುಮಠಕಲï, ಸೈದಾಪುರ, ಬಾಡಿಯಾಳ, ಕಡೆಚೂರು ವ್ಯಾಪ್ತಿಯ ಜನರು ವಿಷ ಬೆರೆತ ಮಲಿನ ನೀರು ಹರಿಯುವ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದು ಮನುಷ್ಯ ಬದುಕು ಪ್ರಾಣಿಗಳಿಗಿಂತ ಕಡೆಯಾಗಿದೆ ಎಂದು ದೂರಿದರು.
ಈ ಘಟನೆ ತುರ್ತು ಸಮಸ್ಯೆ ಎಂದು ಸರ್ಕಾರ ಪರಿಗಣಿಸಿ ಕೂಡಲೇ ಸುರಕ್ಷತಾ ಕ್ರಮ ಸೇರಿ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿ¯್ಲÁಽಕಾರಿಗಳು ಹಾಗೂ ಇತರ ಅಽಕಾರಿಗಳ ಜತೆ ಚರ್ಚಿಸಲಾಗಿದೆ. ಪರಿಸರ ಇಲಾಖೆ ಸದಸ್ಯ ಕಾರ್ಯದರ್ಶಿಗಳಾದ ಗೋಕುಲï ಅವರೊಂದಿಗೆ ಕೂಡ ಮಾತುಕತೆ ನಡೆಸಲಾಗುವುದು ಎಂದು ಎಂದು ಅವರು ಹೇಳಿದರು.
ಬಾಡಿಯಾಳದಲ್ಲಿ ಹರಿಯುವ ನೀರು ವಿಷ ಮಿಶ್ರಿತಗೊಂಡಿದ್ದು ಪೂರ್ಣವಾಗಿ ಕಲುಷಿತವಾಗಿದೆ. ಹಿಂದುಳಿದ ಈ ಪ್ರದೇಶದಲ್ಲಿ ಕೈಗಾರಿಕೆಗಳ ಮಾಲಿನ್ಯದಿಂದಾಗಿ ಜನಜೀವನ ಕಷ್ಟವಾಗುತ್ತಿರುವ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ದೇವರಾಜ ನಾಯಕ, ರವಿ ರಾಠೋಡ್, ಬಂಗಾರು ರಾಠೋಡ್, ಪರಶುರಾಮ ಕುರುಕುಂಟ, ಅಮೃತ ಬೋರಬಂಡ, ವಿಕ್ರಂ ಚವ್ಹಾಣ್, ವಿಜಯ ಜಾಧವ್, ವಿನೋದ ಚವ್ಹಾಣ್ ಯಾಗಾಪುರ, ರವಿ ಸಾಹುಕಾರ, ಯುವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net