ಬೆಳಗಾವಿ : ವಿವಿಧೆಡೆ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 172 ಗ್ರಾಂ ಚಿನ್ನಾಭರಣ ವಶ ಪಡಿಸಲಾಗಿದೆ.
ಉತ್ತರ ಮೂಲದ ಪ್ರದೇಶ ಜಾಕಿ ಉಮರದರಾಜ್ ,ಅಪಸನ ಇರ್ಶಾದ್ ,ಮೊಬಿನಖಾನ್ ಖಲೀಲಾಖಾನ್,ಇಂದ್ರಜೀತ ಲಾಲಸಿಂಗ್ ಮತ್ತು ಮಹ್ಮದಯುಸಪ್ ಇಸ್ಲಾಮುದ್ದಿನ ಬಂಧಿತ ಆರೋಪಿತರು.
ಈಚೆಗೆ ಮಂಗಸೂಳಿ ಮತ್ತು ಕಾಗವಾಡ ಬಸ್ ನಿಲ್ದಾಣದಲ್ಲಿ ಮಹಿಳೆ ಚಿನ್ನಾಭರಣ ಕಳ್ಳತನ ಕುರಿತು ದೂರು ದಾಖಲಿಸಲಾಗಿದೆ. ಕಳ್ಳತನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರಿಂದ 25.80 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಂಡಿರುವುದಾಗಿ ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆ ಪೊಲೀಸರು ತಿಳಿಸಿದ್ದಾರೆ.