ಅಂತಾರಾಜ್ಯ ಮೊಬೈಲ್ ಕಳ್ಳರ ಬಂಧನ

Interstate mobile thieves arrested
Interstate mobile thieves arrested
Published on
ಕೊರಟಗೆರೆ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನರನ್ನು ಯಾಮಾರಿಸಿ ಮೊಬೈಲ್ ಕದಿಯುತ್ತಿದ್ದ ಅಂತಾರಾಜ್ಯ ಖದೀಮರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೈ.ಎಸ್.ನಗರದ ಶಿವಶಂಕರ(19), ತಿರುಪತಿ ಜಿಲ್ಲೆ ಗುಂಡಕಲ್ಲು ಪಟ್ಟಣದ ಪರಶುರಾಮ(22), ಮದನಪಲ್ಲಿ ತಾಲೂಕು ರಾಮರಾವ್ ಕಾಲನಿಯ ರಾಮ(19) ಹಾಗೂ ಗೋಕಾಕ್ ತಾಲೂಕು ಘಟಪ್ರಭ ಗ್ರಾಮದ ಪವನ್(20) ಬಂಧಿತರು.
ೆ.6ರಂದು ಕೊರಟಗೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಶೋಕ್ ಎಂಬುವವರ ಜೇಬಿನಿಂದ 25 ಸಾವಿರ ರೂ. ಬೆಲೆಬಾಳುವ ಮೊಬೈಲ್ ಕಳ್ಳತನದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಕೊರಟಗೆರೆ ಪೊಲೀಸರಿಗೆ ಮೊಬೈಲ್ ಕಳ್ಳರ ಜಾಲ ಸಿಕ್ಕಿಬಿದ್ದಿದೆ.
ಬಂಧಿತ ಆರೋಪಿಗಳಿಂದ ವಿವಿಧ ಕಂಪನಿಗಳ 35 ಲಕ್ಷ ರೂ. ಬೆಲೆಬಾಳುವ ಮೊಬೈಲ್ ೆನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net