ಮಹಿಳಾ ಸಬಲೀಕರಣಕ್ಕೆ ಬಡ್ಡಿರಹಿತ ಸಾಲ / SULIBELE

ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಕಾಳಪ್ಪನಹಳ್ಳಿ ಮಹಿಳಾ ಡೇರಿ ಸದಸ್ಯರಿಗೆ ಕ್ಷೀರ ಸಂಜೀವಿನಿ ಯೋಜನೆಯಡಿ 6.50 ಲಕ್ಷ ರೂ. ಸಾಲವನ್ನು ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ವಿತರಿಸಿದರು. ವಿಸ್ತರಣಾಧಿಕಾರಿ ರಮೇಶ್​, ಲಾವಣ್ಯಾ, ರಾಧಿಕಾ, ಕಾಳಪ್ಪನಹಳ್ಳಿ ಡೇರಿ ಸಿಇಒ ನೀಲಮ್ಮ, ನಿವೃತ್ತ ಪಶು ಸಹಾಯಕ ನಿರ್ದೇಶಕ ಡಾ.ನಾರಾಯಣಸ್ವಾಮಿ ಇದ್ದರು.

Published on
ಸೂಲಿಬೆಲೆ : ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಕ್ಷೀರ ಸಂಜೀವಿನಿ 5ನೇ ಹಂತ ಯೋಜನೆಯಡಿ 14 ಮಂದಿಗೆ 6.50 ಲಕ್ಷ ರೂ. ಮೊತ್ತದ ಸಾಲ ವಿತರಣೆ ಮಾಡಲಾಯಿತು.
ಬೆಂಗಳೂರು ಹಾಲು ಒಕ್ಕೂಟದಿಂದ ಮಹಿಳಾ ಸಬಲೀಕರಣ ಉದ್ದೇಶದಿಂದ ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿದ್ದೇವೆ ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು. ಹಾಲಿನ ಉತ್ಪಾದನೆ ಹೆಚ್ಚಿಸುವ ಹಾಗೂ ಹೈನುಗಾರಿಕೆ ಉತ್ತೇಜಿಸಲು ಸಾಮಾಜಿಕ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಮುಲ್​ ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್​ ಮಾತನಾಡಿ, ಕ್ಷೀರ ಸಂಜೀವಿನಿ 5ನೇ ಹಂತದ ಯೋಜನೆಯಡಿ ಕರ್ನಾಟಕ ಮಿಲ್ಕ್​ ೆಡೇರೇಷನ್​ ಶೇ.80 ಹಾಗೂ ಬೆಂಗಳೂರು ಹಾಲು ಒಕ್ಕೂಟವು ಶೇ.20 ಅನುದಾನವನ್ನು ಮಹಿಳಾ ಹಾಲು ಉತ್ಪಾದಕರ ಸಂಘದ ಮಹಿಳೆಯರಿಗೆ ಕೊಡುವ ಅನುದಾನವಾಗಿದೆ. ಆರ್ಥಿಕ ಮತ್ತು ಸಮಾಜಿಕವಾಗಿ ಸಬಲರಾಗಲು ಬಡ್ಡಿ ರಹಿತವಾಗಿ ನೀಡಲಾಗುತ್ತಿದ್ದು, ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದ್ದು, ಹಾಲಿನ ಕೊರತೆ ಇರುವ ಕಾರಣ ಪ್ರೋತ್ಸಾಹಿಸಲು ಹೆಚ್ಚು ಸಹಾಯ ಹಸ್ತ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.

ಕಾಳಪ್ಪನಹಳ್ಳಿ ಡೇರಿಯಲ್ಲಿ 40 ಸದಸ್ಯರಿದ್ದು, ಪ್ರಥಮ ಹಂತದಲ್ಲಿ 14 ಜನರಿಗೆ 6.50 ಲಕ್ಷ ರೂಪಾಯಿ ಸಾಲ ನೀಡಲಾಗಿದೆ. 2ನೇ ಹಂತದಲ್ಲಿ ಉಳಿದ ಸದಸ್ಯರಿಗೆ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net