ಕೋಲಾರ: ಪ್ರವಾದಿ ಮಹ್ಮದ್ ಹಾಗೂ ಹಜರತ್ ಆಯಿಷಾ ಸಿದ್ಧಿಖಿ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಕೋಲ್ಕತದ ನಾಜಿಯಾ ಇಲಾಹಿ ಖಾನ್ ಎಂಬ ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿ ನಗರದ ಮೆಕ್ಕೆ ವೃತ್ತದಲ್ಲಿ ಜಿಲ್ಲಾ ಮುಸ್ಲಿಂ ಯೂತ್ ಪೋರಂನಿಂದ ಪ್ರತಿಭಟಿಸಿ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತರುವಂತೆ ಆಗ್ರಹಿಸಿದರು.
ನಾಜಿಯಾ ಅವರು ಮುಸ್ಲಿಂಮರ ಧಾರ್ಮಿಕ ನಂಬಿಕೆ, ವಿಶ್ವಾಸಗಳಿಗೆ ಧಕ್ಕೆ ತಂದಿದ್ದಾರೆ. ಅವರ ಹೇಳಿಕೆಯಿಂದ ಅಸಹನೆ ಮೂಡಿದೆ. ಶಾಂತಿ, ನೆಮ್ಮದಿಯ ಬದುಕಿಗೆ ಭಂಗ ತಂದಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಯುವ ಮುಖಂಡ ಸಾದಿಕ್ ಅಹ್ಮದ್ ಮಾತನಾಡಿ, ಜಾತಿ&ಧರ್ಮದ ಅರಿವಿರದೆ ಕೋಮುಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ಕೃತ್ಯದಿಂದ ಎಲ್ಲರಿಗೂ ನೋವುಂಟಾಗಿದೆ. ಪ್ರವಾದಿಯವರ ಬಗೆಗಿನ ಯಾವುದೇ ಅವಹೇಳನ ಸಹಿಸಲ್ಲ ಎಂದರು. ಮುಖಂಡರಾದ ಇಮ್ರಾನ್ ಪಾಷಾ, ಮನ್ಸೂರ್ ಅಲಿ ಇದ್ದರು.