

ತಿ.ನರಸೀಪುರ : ಉತ್ತರಾಖಂಡದ ಹಲ್ದ್ವಾನಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗಂಜಳ ಎರಚಿ, ಗಂಗಾಜಲದಲ್ಲಿ ಶುದ್ಧೀಕರಣ ಮಾಡಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ಇತ್ತೀಚೆಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ್ದ ದಸಂಸ ಕಾರ್ಯಕರ್ತರು ಹಾಗೂ ಮುಖಂಡರು ಉತ್ತರಾಖಂಡದ ಘಟನೆಗೆ ಖಂಡನೆ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿದರು.
ದಸಂಸ ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಜಾತೀಯತೆ ಮತ್ತು ಮನುವಾದಿಗಳ ವಿಕೃತ ಸಿದ್ಧಾಂತ ಬದಲಾಗಿಲ್ಲ. ಘಟನೆಯನ್ನು ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದಸಂಸ ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಬೆನಕನಹಳ್ಳಿ ಗಂಗಾದರ್, ಕಿರಗಸೂರು ರಜನಿ, ತುರಗನೂರು ಲಕ್ಷ್ಮಣ್, ಕರೋಹಟ್ಟಿ ನಾಗೇಶ್, ನರೇಶ್, ಯಡದೊರೆ ನಾರಾಯಣ, ಇಂಡವಾಳು ಹೊನ್ನಯ್ಯ, ನಾಗರಾಜು, ಉಕ್ಕಲಗೆರೆ ರವಿಶಂಕರ್, ಕನ್ನಹಳ್ಳಿ ಸೋಮಣ್ಣ, ಆಲಗೂಡು ನಾಗರಾಜ್ ಮೂರ್ತಿ, ಮುತ್ತು, ಶಾಂತಕುಮಾರ್, ಸೋಸಲೆ ಶಿವಣ್ಣ, ಸುಜ್ಜಲೂರು ಶಿವಯ್ಯ, ಕುಕ್ಕೂರು ಪ್ರಭು, ದೊಡ್ಡಬಾಗಿಲು ಶಂಕರಮೂರ್ತಿ, ಸಿದ್ದರಾಜು, ಮಾದಪುರ ಉಮೇಶ್, ಕೇತಹಳ್ಳಿ ಪ್ರಶಾಂತ್, ತುಂಬಲ ಅಶ್ವತ್ಥ್, ವಾಟಾಳ್ ಶಿವಣ್ಣ, ಕನ್ನಾಯಕನಹಳ್ಳಿ ಮಹದೇವ್ ಇತರರು ಇದ್ದರು.