ಸರ್ಕಾರಿ ಶಾಲೆಗಳಲ್ಲಿ 2 ತಿಂಗಳಿಗೊಮ್ಮೆ ಪಾಲಕ-ಶಿಕ್ಷಕ ಸಭೆ ನಡೆಸಲು ಸೂಚನೆ

ಶಾಲೆಗಳಲ್ಲಿ 2 ತಿಂಗಳಿಗೊಮ್ಮೆ ಪಾಲಕ-ಶಿಕ್ಷಕ ಸಭೆ
ಶಾಲೆಗಳಲ್ಲಿ 2 ತಿಂಗಳಿಗೊಮ್ಮೆ ಪಾಲಕ-ಶಿಕ್ಷಕ ಸಭೆ
Published on
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಪಾಲಕರ- ಶಿಕ್ಷಕರ ಮಹಾಸಭೆಯನ್ನು (ಪೇರೆಂಟ್-ಟೀಚರ್ ಮೀಟಿಂಗ್-ಪಿಟಿಎಂ) ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಅದರಂತೆ ಜ.3ರಂದು ಹಾಗೂ ೆ.28ರಂದು ಸಭೆ ನಡೆಸಲು ವೇಳಾಪಟ್ಟಿ ಹೊರಡಿಸಿದೆ.
ಕಳೆದ ನ.14ರಂದು ರಾಜ್ಯಾದ್ಯಂತ ಪಾಲಕರ- ಶಿಕ್ಷಕರ ಸಭೆ ನಡೆಸಲಾಗಿತ್ತು. ಇದೇ ರೀತಿ ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಲು ಸೂಚಿಸಲಾಗಿತ್ತು. ಪ್ರಸ್ತುತ ದಿನಾಂಕ ನಿಗದಿ ಮಾಡಿ ಸುತ್ತೋಲೆ ಹೊರಡಿಸಿದೆ.
ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಶಾಲೆಗಳಲ್ಲಿ ಸಭೆ ನಡೆಸಿದ ವಿವರ, ಹಾಜರಾದ ವಿದ್ಯಾರ್ಥಿಗಳು, ಆಹ್ವಾನಿಸಿದ ಪಾಲಕರು ಹಾಗೂ ಹಾಜರಾದ ಪಾಲಕರ ಸಂಖ್ಯೆಯ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದಂತೆ ನ.14ರ ಸಭೆಗೆ ನೀಡಲಾದ ಸೂಚನೆಗಳನ್ನು ಪಾಲಿಸುವಂತೆ ಇಲಾಖೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net