ನದಿ ತೀರಕ್ಕೆ ತೆರಳದಂತೆ ಸೂಚನೆ

ಕಕ್ಕೇರಾ ಸಮೀಪದ ತಿಂಥಣಿ ಮೌನೇಶ್ವರ ಪಕ್ಕದ ಕೃಷ್ಣಾನದಿಗೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟ ಕಾರಣ ಸುರಪುರ ಠಾಣೆಯ ತಿಂಥಣಿ-ದಾದಲಾಪುರ ಬೀಟ್‌ನ ಜನಸ್ನೇಹಿ ಪೊಲೀಸ್ ಅಽಕಾರಿ ದಯಾನಂದ ಜಮಾದಾರ ನದಿ ತೀರಕ್ಕೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಿದರು. ಬಸವರಾಜ ರಾಮದುರ್ಗ, ಯಲ್ಲಪ್ಪ ಅರಳಗುಂಡಗಿ, ವೆಂಕೋಬ ಹಾವಿನಾಳ್, ಎಎಸ್‌ಐ ಬೀರಪ್ಪ, ಅಂಬರೀಶ ಚಿಕ್ಕನಳ್ಳಿ, ನಂದಪ್ಪ ಜಣಜಲಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಅಽಕಾರಿ ದಯಾನಂದ ಮನವಿ
  • ಬಸವಸಾಗರ ಜಲಾಶಯದಿಂದ ೧.೨೦ ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ
ಕಕ್ಕೇರಾ: ನಾರಾಯಣಪುರ ಬಸವಸಾಗರ ಜಲಾಶಯದಿಂದ ಗುರುವಾರ ಸಂಜೆ ಕೃಷ್ಣಾನದಿಗೆ ೧.೨೦ ಲಕ್ಷ ಕ್ಯೂಸೆಕ್ ನೀರು ಹರಿದುಬಿಟ್ಟ ಕಾರಣ ತಿಂಥಣಿ ಮೌನೇಶ್ವರ ಪಕ್ಕದ ಕೃಷ್ಣಾನದಿಗೆ ಯಾರೂ ತೆರಳದಂತೆ ತಿಂಥಣಿ-ದಾದಲಾಪೂರ ಬೀಟ್‌ನ ಜನಸ್ನೇಹಿ ಪೊಲೀಸ್ ಅಽಕಾರಿ ದಯಾನಂದ ಜಮಾದಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.
ಗುರುವಾರ ಸಂಜೆ ತಿಂಥಣಿ ಮೌನೇಶ್ವರ ಪಕ್ಕದ ಕೃಷ್ಣಾನದಿ ತೀರಕ್ಕೆ ತೆರಳಿ ಮಾತನಾಡಿದ ಅವರು, ಕೃಷ್ಣಾನದಿಗೆ ಗುರುವಾರ ಸಂಜೆ ಅಪಾರ ಪ್ರಮಾಣದಲ್ಲಿ ಜಲಾಶಯದಿಂದ ಹರಿಬಿಟ್ಟಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವ ಸಾಧ್ಯತೆ ಇರುವ ಕಾರಣ ನದಿ ತೀರಕ್ಕೆ ಮಹಿಳೆಯರು ಬಟ್ಟೆ ತೊಳೆಯಲು, ಯುವಕರು ಬೈಕ್ ತೊಳೆಯಲು, ಮಕ್ಕಳನ್ನು ನದಿ ದಂಡೆಯಲ್ಲಿ ಆಟವಾಡಲು ಹಾಗೂ ಈಜಲು, ಸೆಲಿ -ೆÇÃಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ಯುವಕರು ಮೋಜು ಮಸ್ತಿಗಾಗಿ, ಕುರಿಗಾರಿಗಳು ಕುರಿ ಮೇಯಿಸಲು, ದನಕರುಗಳನ್ನು ಹಾಗೂ ಮೀನು ಹಿಡಿಯಲು ಮೀನುಗಾರರು ಸಹ ನದಿ ತೀರಕ್ಕೆ ಹೋಗಬಾರದು ಎಂದು ಸೂಚನೆ ನೀಡಿದ್ದಾರೆ.
ರೈತರು ನದಿತೀರದಲ್ಲಿ ಅಳವಡಿಸಿರುವ ಪಂಪಸೆಟ್‌ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು. ನದಿ ಪಾತ್ರದ ಗ್ರಾಮಗಳಾದ ಬಂಡೊಳ್ಳಿ, ದಾದಲಪುರ, ತಿಂಥಣಿ, ಅರಳಹಳ್ಳಿ, ದೇವಾಪೂರ, ಶೆಳ್ಳಗಿ, ಮುಷ್ಠಳ್ಳಿ, ಬೇವಿನಾಳ, ಸೂಗೂರು, ಹೆಮ್ಮಡಗಿ, ಅಡ್ಡೋಡಗಿ, ಚೌಡೇಶ್ವರಿಹಾಳ್, ಕರ್ನಾಳ್, ಹೆಮನೂರು ಗ್ರಾಮಗಳ ಜನರು ನದಿ ದಂಡೆಗೆ ಹೋಗದಂತೆ ಎಚ್ಚರ ವಹಿಸಬೇಕು. ಯಾವುದೇ ತುರ್ತು ಸಮಯದಲ್ಲಿ ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡುವಂತೆ ಸಲಹೆ ನೀಡಿದರು.
ಮೌನೇಶ್ವರ ದೇವಸ್ಥಾನದ ನದಿ ದಂಡೆಯಲ್ಲಿ ಹಾಕಲಾಗಿದ್ದ ೪ ಶೆಡ್‌ಗಳನ್ನು ತೆರವುಗೊಳಿಸಲಾಯಿತು. ತಿಂಥಣಿ ಗ್ರಾಪಂ ಕರ‍್ಯದರ್ಶಿ ಬಸವರಾಜ ರಾಮದುರ್ಗ, ಯಲ್ಲಪ್ಪ ಅರಳಗುಂಡಗಿ, ವೆಂಕೋಬ ಹಾವಿನಾಳ್, ಎಎಸ್‌ಐ ಬೀರಪ್ಪ, ಪೇದೆಗಳಾದ ಅಂಬರೀಶ ಚಿಕ್ಕನಳ್ಳಿ, ನಂದಪ್ಪ ಜಣಜಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net