ಅವಿಭಕ್ತ ಕುಟುಂಬಗಳಿಂದ ಸಂಸ್ಕಾರ ಸಾಧ್ಯ Competition

ಚಿಕ್ಕನಾಯಕನಹಳ್ಳಿಯಲ್ಲಿ Competition ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನವದಂಪತಿ ಸ್ಪರ್ಧೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಉಪಾದ್ಯಕ್ಷ ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಕೆ.ಎಸ್​.ಕಿರಣ್​ ಕುಮಾರ್​, ಕಲಾಸಂಘದ ಸಿ.ಡಿ.ಚಂದ್ರಶೇಖರ್​, ವೇದಿಕೆ ಕಾರ್ಯದರ್ಶಿ ಕೆ.ಜಿ.ಕೃಷ್ಣೇಗೌಡ ಇತರರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ Competition ಹಮ್ಮಿಕೊಂಡಿದ್ದ ರಾಜ್ಯಮಟ್ಟದ ನವದಂಪತಿ ಸ್ಪರ್ಧೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಉಪಾದ್ಯಕ್ಷ ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಕೆ.ಎಸ್​.ಕಿರಣ್​ ಕುಮಾರ್​, ಕಲಾಸಂಘದ ಸಿ.ಡಿ.ಚಂದ್ರಶೇಖರ್​, ವೇದಿಕೆ ಕಾರ್ಯದರ್ಶಿ ಕೆ.ಜಿ.ಕೃಷ್ಣೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯ
ಚಿಕ್ಕನಾಯಕನಹಳ್ಳಿ: ಜಾತ್ರೆಯಲ್ಲಿ ಸಾಂಸತಿಕ ಸ್ಪರ್ಧೆಗಳನ್ನು ಆಯೋಜಿಸುವುದು ಉತ್ತಮ ಬೆಳವಣಿಗೆ. ಇಂತಹ ಸ್ಪರ್ಧೆಗಳಲ್ಲಿ ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪುನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ಕನ್ನಡ ಸಂಘದ ವೇದಿಕೆಯಲ್ಲಿ ಹಳೆಯೂರು ಶ್ರೀ ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದಿಂದ ಹಮ್ಮಿಕೊಂಡಿದ್ದ 33ನೇ ವರ್ಷದ ರಾಜ್ಯಮಟ್ಟದ ನವದಂಪತಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಇಂತಹ ಸಾಂಸತಿಕ ಕಾರ್ಯಕ್ರಮ ರೂಪಿಸಿರುವುದು ದಿವ್ಯಜ್ಯೋತಿ ಕಲಾಸಂಘದ ಯಶಸ್ಸನ್ನು ತೋರಿಸುತ್ತದೆ ಎಂದರು. Competition
ಮಾಜಿ ಶಾಸಕ ಕೆ.ಎಸ್​.ಕಿರಣ್​ ಕುಮಾರ್​ ಮಾತನಾಡಿ, ದಂಪತಿಗಳು ಒಬ್ಬರನ್ನೊಬ್ಬರು ಅರಿತು ಸಂಸಾರ ಮಾಡಿದಾಗಲೇ ಜೀವನ ಸುಖವಾಗಿರುತ್ತದೆ. ಕುಟುಂಬದೊಂದಿಗೆ ಬೆಳೆದ ಮಕ್ಕಳು ಸಂಸ್ಕಾರ ಕಲಿತು ಸಮಾಜಕ್ಕೆ ದಾರಿದೀಪವಾಗಿ ಬೆಳೆಯುತ್ತಾರೆ. ಮಕ್ಕಳನ್ನು ಸಮಾಜದಲ್ಲಿ ಒಳ್ಳೆಯ ಮನುಷ್ಯರನ್ನಾಗಿ ರೂಪಿಸಲು ಅವಿಭಕ್ತ ಕುಟುಂಬವಿರಬೇಕು ಎಂದರು.
ಕಲಾಸಂಘದ ಸಿ.ಡಿ.ಚಂದ್ರಶೇಖರ್​ ಮಾತನಾಡಿ, ನವ ದಂಪತಿ ಸ್ಪರ್ಧೆಯಲ್ಲಿ ಪಟ್ಟಣದ ನಯನಾ ಮತ್ತು ಪ್ರಜ್ವಲ್​ ಪ್ರಥಮ, ಹಂದನಕೆರೆಯ ತನುಶ್ರೀ ಮತ್ತು ನವೀನ್​ ಕುಮಾರ್​ ದ್ವೀತಿಯ, ಗೋಡೆಕೆರೆಯ ಕಾವ್ಯಾ ಮತ್ತು ತ್ರಿಭುವನ್​ ತೃತೀಯ, ಹೆಸರಹಳ್ಳಿಯ ನವ್ಯಶ್ರೀ ಮತ್ತು ರಾಕೇಶ್​ 4ನೇ ಸ್ಥಾನ ಹಾಗೂ ಮತ್ತಘಟ್ಟದ ಕವನಶ್ರೀ ಮತ್ತು ಸಾಗರ್​ ಮತ್ತು ಚಿಕ್ಕರಾಠಪುರದ ಜ್ಯೋತಿಕಾ ಮತ್ತು ಚಂದ್ರಶೇಖರ ಸಮಾಧಾನಕರ ಪ್ರಶಸ್ತಿ ಪಡೆದಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವಕ, ತಿಪಟೂರಿನ ಕುಮಾರ್​ ಆಸ್ಪತ್ರೆಯ ಡಾ.ಶ್ರೀ ಧರ್​, ಪ್ರಥಮ ದರ್ಜೆ ಗುತ್ತಿಗೆದಾರ ಅರಳಿಕೆರೆ ಮಧು, ಅನ್ವರ್​ ಫಜಲ್​, ರೂಪೇಶ್​, ವಾಸುದೇವ್​, ಸಿಧಾರ್ಥ್​ ವಿಜೇತರಿಗೆ ಬಹುಮಾನ ವಿತರಿಸಿದರು.
ನಿರೂಪ್​ ರಾವತ್​, ಲ್ಯಾಬ್​ ರವಿಕುಮಾರ್​, ಸತೀಶ್​, ಜಾಕೀರ್​, ಸುರೇಶ್​, ತೀರ್ಥಪುರ ವಾಸು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net