ತುರುವೇಕೆರೆ ಗ್ಲೋಬಲ್ ಎಂಬಸ್ಸಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಛದ್ಮವೇಷಣ ಸ್ಪರ್ಧೆಯಲ್ಲಿ ಮಕ್ಕಳು ವಿವಿಧ ಮಹಾನ್ ವ್ಯಕ್ತಿಗಳ ವೇಷ ಧರಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ಬಿಎಮ್ಎಸ್ ಉಮೇಶ್, ಕಾರ್ಯದರ್ಶಿ ಉಪೇಂದ್ರ ಕುಮಾರ್, ಖಜಾಂಚಿ ಸುನಿಲ್ ಇದ್ದರು.
Published on:
Copied
Follow Us
ತುರುವೇಕೆರೆ :
ಮಕ್ಕಳನ್ನು ಸ್ಪರ್ಧೆಗೆ ಸೀಮಿತಗೊಳಿಸದೆ ಮುಂದಿನ ಪೀಳಿಗೆಗೆ ಸಂಸ್ಕಾರ, ಪರಂಪರೆ, ಇತಿಹಾಸದ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ಸಲಹೆ ನೀಡಿದರು.
ಪಟ್ಟಣದ ಗ್ಲೋಬಲ್ ಎಂಬಸ್ಸಿ ಶಾಲಾಯಲ್ಲಿ ರೋಟರಿ ಕ್ಲಬ್ನಿಂದ ಹಮ್ಮಿಕೊಂಡಿದ್ದ ಛದ್ಮವೇಷಣ ಸ್ಪರ್ಧೆಯಲ್ಲಿ ಮಾತನಾಡಿ, ಮಗು ಒಬ್ಬ ವ್ಯಕ್ತಿಯ ವೇಷಭೂಷಣ ತೊಟ್ಟಾಗ ಆ ವ್ಯಕ್ತಿಯ ಕುರಿತು ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು. ಹೊಸ-ಹೊಸ ಪಾತ್ರ ಹುಡುಕಿ ಮಕ್ಕಳನ್ನು ತಯಾರಿ ಮಾಡುವ ಸಂದರ್ಭದಲ್ಲಿ ನಮ್ಮಲ್ಲೊಬ್ಬ ಆದರ್ಶ ವ್ಯಕ್ತಿ ಇರಬೇಕು.
ಗಾಂಧಿ, ಬುದ್ಧ, ನೆಹರು, ವಿವೇಕಾನಂದ, ಝಾನ್ಸಿರಾಣಿಯಂತ ಮಹಾನ್ ಹೋರಾಟಗಾರರ ವೇಷ ತೊಡಿಸಿದ ತಾಯಂದಿರು ಅವರ ಕುರಿತು ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು. ಜತೆಗೆ ಎಲೆಮರೆ ಕಾಯಿಯಂತೆ ಹೋರಾಡಿದ ಅದೆಷ್ಟೋ ಸಾಧಕರಿದ್ದು, ಅಂತಹವರನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಶಾಲೆಯ ಮುಖ್ಯಸ್ಥ ಗಂಗಾಧರ ದೇವರಮನೆ ಮಾತನಾಡಿ, ರೋಟರಿ ಸಂಘ-ಸಂಸ್ಥೆಗಳು ಛದ್ಮವೇಷದಂತಹ ಹಲವು ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇಂದಿನ ಮಕ್ಕಳಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಸಂಸ್ಥೆ ಅಧ್ಯಕ್ಷರು, ಪದಾಧಿಕಾರಿಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಟ್ರಸ್ಟ್ ಅಧ್ಯಕ್ಷ ಸಾ.ಶಿ.ದೇವರಾಜು, ಸದಸ್ಯರಾದ ಪ್ರಸನ್ನಕುಮಾರ್, ಜಿಲನ್ ಬೇಗ್, ರಾಮಚಂದ್ರು, ಗಂಗಾಧರಯ್ಯ, ಶಿವರಾಜು, ಅಶ್ವಿನ್, ದಯಾನಂದ್, ಪ್ರಾಯೋಜಕ ಲೋಹಿತ್, ಭಾನುಪ್ರಕಾಶ್, ಮುಖ್ಯಶಿಕ್ಷಕಿ ಶರಿತಾ ದೇವರಮನೆ, ಮೇಘ ಸಂತೋಷ್, ತೀರ್ಪುಗಾರರಾದ ಲೋಕೇಶ್, ಜಯಶೀಲಾ, ನೇತ್ರಾ ಇದ್ದರು.