ಮಾಡಾಳು ಶ್ರೀ ಸ್ವರ್ಣ ಗೌರಮ್ಮ ಪ್ರತಿಷ್ಠಾಪನೆ

  ಮಾಡಾಳು ಗ್ರಾಮದ ಮೂಲ ಶ್ರೀ ಸ್ವರ್ಣಗೌರಮ್ಮನ ಮೂರ್ತಿ.
ಮಾಡಾಳು ಗ್ರಾಮದ ಮೂಲ ಶ್ರೀ ಸ್ವರ್ಣಗೌರಮ್ಮನ ಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮ
  • ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿ ಮೂರ್ತಿ
ಅರಸೀಕೆರೆ ಗ್ರಾಮಾಂತರ: ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಶಕ್ತಿದೇವತೆ ಹಾಗೂ ’ಮೂಗುತಿ ಸುಂದರಿ’ ಎಂದೇ ಖ್ಯಾತಿ ಪಡೆದಿರುವ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಿ ದೇವಿ ಮೂರ್ತಿಯನ್ನು ನೂತನ ದೇವಾಲಯದಲ್ಲಿ ಸೋಮವಾರ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಯಿತು.
ಹಾರನಹಳ್ಳಿ ಸುಕ್ಷೇತ್ರ ಕೋಡಿ ಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಸಾನ್ನಿಧ್ಯದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರ ಪ್ರತಿಷ್ಠಾಪನಾ ವಿಧಿವಿಧಾನಗಳು ಅದ್ದೂರಿಯಾಗಿ ನೆರವೇರಿದವು.
ಮೂಗುತಿ ಧಾರಣೆ, ಅದ್ಧೂರಿ ಮೆರವಣಿಗೆ: ಬೆಳಿಗ್ಗೆ ಮೂಲ ಸನ್ನಿಧಿಗೆ ಆಗಮಿಸಿದ ಕೋಡಿ ಮಠದ ಶ್ರೀಗಳು, ದೇವರ ಮನೆಯಲ್ಲಿ ಲಿಂಗ ಪೂಜಾನುಷ್ಠಾನ ನೆರವೇರಿಸಿದರು. ಬಳಿಕ ಜಗನ್ಮಾತೆ ಸ್ವರ್ಣ ಗೌರಮ್ಮನವರಿಗೆ ಮೂಗುತಿ ಧಾರಣೆ ಮಾಡಿದರು. ಇದೇ ವೇಳೆ ಮುತ್ತೈದೆಯರು ಗಂಗಾ ಬಾವಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ನಂತರ ಕರಡೇವು ಮತ್ತು ಮಂಗಳವಾದ್ಯಗಳೊಂದಿಗೆ ಅಮ್ಮನವರ ಉತ್ಸವ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಬಳಿಕ ದೇವಿಯ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಕಣ್ಮನ ಸೆಳೆಯುತ್ತಿರುವ ಗ್ರಾಮ: ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮವು ನವವಧುವಿನಂತೆ ಕಂಗೊಳಿತು. ಗ್ರಾಮದೆಲ್ಲೆಡೆ ಮಾವಿನ ತಳಿರು ತೋರಣ, ಬಾಳೆಕಂದುಗಳಿಂದ ಶೃಂಗಾರ ಮಾಡಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net