ಮೂಗುತಿ ಧಾರಣೆ, ಅದ್ಧೂರಿ ಮೆರವಣಿಗೆ: ಬೆಳಿಗ್ಗೆ ಮೂಲ ಸನ್ನಿಧಿಗೆ ಆಗಮಿಸಿದ ಕೋಡಿ ಮಠದ ಶ್ರೀಗಳು, ದೇವರ ಮನೆಯಲ್ಲಿ ಲಿಂಗ ಪೂಜಾನುಷ್ಠಾನ ನೆರವೇರಿಸಿದರು. ಬಳಿಕ ಜಗನ್ಮಾತೆ ಸ್ವರ್ಣ ಗೌರಮ್ಮನವರಿಗೆ ಮೂಗುತಿ ಧಾರಣೆ ಮಾಡಿದರು. ಇದೇ ವೇಳೆ ಮುತ್ತೈದೆಯರು ಗಂಗಾ ಬಾವಿಗೆ ತೆರಳಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.
ನಂತರ ಕರಡೇವು ಮತ್ತು ಮಂಗಳವಾದ್ಯಗಳೊಂದಿಗೆ ಅಮ್ಮನವರ ಉತ್ಸವ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ಬಳಿಕ ದೇವಿಯ ಪ್ರತಿಷ್ಠಾಪನೆ ನೆರವೇರಿಸಲಾಯಿತು.