ಟ್ರಾಫಿಕ್ ಸಿಗ್ನಲ್-ಹಂಪ್ಸ್ ಅಳವಡಿಸಿ

ಲಿಂಗಸುಗೂರಿನಲ್ಲಿ ಎಸಿ ಕಚೇರಿ ಎಫ್‌ಡಿಎ ಅನುಪಮಾ ಸಿಂಗ್‌ಗೆೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಮಹ್ಮದ್ ಅಜಮೀರ್, ರವಿಕುಮಾರ ಬರಗುಂಡಿ, ಅಜೀಜ್‌ಪಾಷಾ, ಮೋಶಿನ್ ಖಾನ್ ಇತರರಿದ್ದರು.
ಲಿಂಗಸುಗೂರಿನಲ್ಲಿ ಎಸಿ ಕಚೇರಿ ಎಫ್‌ಡಿಎ ಅನುಪಮಾ ಸಿಂಗ್‌ಗೆೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಮಹ್ಮದ್ ಅಜಮೀರ್, ರವಿಕುಮಾರ ಬರಗುಂಡಿ, ಅಜೀಜ್‌ಪಾಷಾ, ಮೋಶಿನ್ ಖಾನ್ ಇತರರಿದ್ದರು.
Published on
ಲಿಂಗಸುಗೂರು: ಬಸ್ ನಿಲ್ದಾಣ ಹತ್ತಿರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಹಾಗೂ ರಬ್ಬರ್ ಹಂಪ್ಸ್ ಅಳವಡಿಸಬೇಕೆಂದು ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮಂಗಳವಾರ ಸಹಾಯಕ ಆಯುಕ್ತ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಿದರು.
ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಸಾರ್ವಜನಿಕರಿಂದ ರಸ್ತೆ ಜನನಿಬಿಡಲಾಗುತ್ತದೆ. ಜನದಟ್ಟಣೆಯಿಂದ ವಾಹನಗಳ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ.
ಪಾದಚಾರಿಗಳಿಗೆ ರಸ್ತೆ ದಾಟಲು ತೊಂದರೆ ಆಗುತ್ತಿದ್ದು, ವೃತ್ತದ ನಾಲ್ಕೂ ದಿಕ್ಕುಗಳಲ್ಲಿ ಸ್ವಯಂಚಾಲಿತ ಟ್ರಾಫಿಕ್ ಸಿಗ್ನಲ್ ಹಾಗೂ ವೈಜ್ಞಾನಿಕ ಹಂಪ್ಸ್, ಝೀಬ್ರಾ ಕ್ರಾಸಿಂಗ್ ಫಲಕ, ವೇಗಮಿತಿ ಫಲಕ ಅಳವಡಿಸಬೇಕು. ಮನವಿಗೆ ಸ್ಪಂದಿಸದಿದ್ದರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಮಹ್ಮದ್ ಅಜಮೀರ್, ರವಿಕುಮಾರ ಬರಗುಂಡಿ, ಅಜೀಜ್‌ಪಾಷಾ, ಮೋಶಿನ್ ಖಾನ್, ಅಲ್ಲಾಉದ್ದೀನ್ ಬಾಬಾ, ಬಸನಗೌಡ, ಮಲ್ಲನಗೌಡ, ಜಮೀರ್ ಖಾನ್, ಇಲಿಯಾಸ್, ಶಬ್ಬೀರ್, ರೆಹಮಾನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net