ಎಲ್ಲ ಅಂಗಡಿಗೂ ಸಿಸಿಟಿವಿ ಅಳವಡಿಸಿಕೊಳ್ಳಿ CCTV

ಎಲ್ಲ ಅಂಗಡಿಗೂ ಸಿಸಿಟಿವಿ ಅಳವಡಿಸಿಕೊಳ್ಳಿ  CCTV
ಎಲ್ಲ ಅಂಗಡಿಗೂ ಸಿಸಿಟಿವಿ ಅಳವಡಿಸಿಕೊಳ್ಳಿ CCTV
Published on
ಬಂಗಾರಪೇಟೆ: ಸರಗಳ್ಳತನ, ಮನೆ ದರೋಡೆ ಹಾಗೂ ಕಳವು ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಎಲ್ಲ ಚಿನ್ನದಂಗಡಿ ಮತ್ತು ವಿವಿಧ ವ್ಯಾಪಾರ ಅಂಗಡಿಗಳಲ್ಲಿ ಆಡಿಯೋ ಮತ್ತು ವಿಡಿಯೋ ಸೌಲಭ್ಯವುಳ್ಳ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಇನ್​ಸ್ಪೆಕ್ಟರ್​ ರವಿಕುಮಾರ್​ ಸೂಚಿಸಿದರು.CCTV
ನಗರದ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಅಂಗಡಿ ಮಾಲೀಕರಿಗಾಗಿ ಸ್ಥಳಿಯ ಪೊಲೀಸ್​ ಇಲಾಖೆ ಹಮ್ಮಿಕೊಂಡಿದ್ದ ಕಾನೂನು ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯರ ಮೇಲೆ ಹಲ್ಲೆ, ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಖಾಲಿ ಮನೆಗಳಲ್ಲಿ ದರೋಡೆ ನಡೆಯುತ್ತಿರುವ ಘಟನೆಗಲೂ ಕಂಡುಬರುತ್ತಿವೆ ಎಂದು ಹೇಳಿದರು.
ಯಾವುದೇ ಅಪರಿಚಿತರು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ವ್ಯಾಪಾರಕ್ಕೆ ಬಂದಲ್ಲಿ ಅವರ ಆಧಾರ್​ಕಾರ್ಡ್​ ಪರಿಶೀಲಿಸಿ, ಅಗತ್ಯವಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಅಂಗಡಿಗಳಲ್ಲಿ ಕಳವು ಮಾಡಿದ ವಸ್ತುಗಳನ್ನು ಸ್ವೀಕರಿಸಬಾರದು ಎಂದು ಎಚ್ಚರಿಸಿ, ಸಿಸಿಟಿವಿ ಅಳವಡಿಕೆಯಿಂದ ಅಪರಿಚಿತರು ತಂದಿರುವ ಅನುಮಾನಾಸ್ಪದ ವಸ್ತುಗಳ ದಾಖಲೆ ಲಭ್ಯವಾಗುವುದರಿಂದ ಕಳ್ಳರನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net