ತಾಲೂಕಿನ ಕಸಬಾ ಹೋಬಳಿಯ ಕದರೀಪುರ ಗ್ರಾಮದ ನಾಗರಾಜ್ ಬಿನ್ ವೆಂಕಟರಾಮಪ್ಪ ಕೃಷಿಭಾಗ್ಯ (ಎಸ್ಡಿಎಂಸಿ) ಯೋಜನೆಯಡಿ ನಿರ್ಮಿಸಿರುವ ಕೃಷಿ ಹೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ಕೃಷಿ ಹೊಂಡಗಳಲ್ಲಿ ಬಿದ್ದು ಪ್ರಾಣಹಾನಿ ಸಂಭವಿಸುವುದನ್ನು ತಪ್ಪಿಸಲು ತಂತಿಬೇಲಿ ಅಳವಡಿಸಿಕೊಳ್ಳುವ ಜೊತೆಗೆ ಸೂಚನಾ ಫಲಕ ಕಡ್ಡಾಯವಾಗಿ ಅಳವಡಿಸಲು ಸೂಚಿಸಲಾಗಿದೆ ಎಂದರು.