ಜಾಗತಿಕ ಮಟ್ಟದಲ್ಲಿ ಹವ್ಯಾಸಿ ಸೈಕ್ಲಿಂಗ್ ಆಸಕ್ತರಿಗಾಗಿ ಟೂರ್ ಡಿ ಫ್ರಾನ್ಸ್ ಅಧಿಕೃತ ಸ್ಪರ್ಧೆಗಳನ್ನು ಆಮ್ಯುಯೆರಿ ಸ್ಪೋರ್ಟ್ಸ್ ಸಂಸ್ಥೆಯು ಲ ಟೇಪ್ ಹೆಸರಿನಲ್ಲಿ ಆಯೋಜಿಸುತ್ತಾ ಬಂದಿದೆ. ಜಗತ್ತಿನಾದ್ಯಂತ ಇರುವ ಸೈಕ್ಲಿಸ್ಟ್ಗಳು ತಮ್ಮದೇ ದೇಶದಲ್ಲಿ ಟೂರ್ ಡಿ ಫ್ರಾನ್ಸ್ ಅನುಭವಗಳನ್ನು ಈ ಸ್ಪರ್ಧೆಯಲ್ಲಿ ಪಡೆಯಬಹುದು. ಪ್ರತಿವರ್ಷ ಸುಮಾರು 21 ದೇಶಗಳಲ್ಲಿ, 30ಕ್ಕೂ ಹೆಚ್ಚು ಸೈಕ್ಲಿಂಗ್ ಸ್ಪರ್ಧೆಗಳು ಈ ಬ್ರಾ6್ಯಂಡ್‌ನಡಿ ನಡೆಯುತ್ತಿವೆ. 50,000ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಳ್ಳುತ್ತಿದ್ದಾರೆ. ಯುರೋಪ್, ಏಷ್ಯಾ, ಅಮೆರಿಕ, ಟರ್ಕಿ, ದುಬೈ, ಬ್ರೆಜಿಲ್, ಚೆಕ್ ರಿಪಬ್ಲಿಕ್, ಚೀನಾ, ಆಸ್ಟೆಥಲಿಯಾ, ಇದೀಗ ಭಾರತದಲ್ಲೂ ಇದು ಆಯೋಜಿತವಾಗುತ್ತಿದೆ.